ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತಾಂತರ ನಿಷೇಧ ಕಾಯ್ದೆ ಬಗ್ಗೆ ತಾರಾ ಹೇಳಿದ್ದೆನು?

ಹುಬ್ಬಳ್ಳಿ : ಮತಾಂತರ ನಿಷೇಧ ಕಾಯ್ದೆ ವಿಚಾರ, ಯಾರಿಗೆ ಆಗಲಿ ಬಲವಂತವಾಗಿ ಮತಾಂತರ ಮಾಡಿದ್ರೆ ಅದು ಕಾನೂನು ಮತ್ತು ವೈಯಕ್ತಿಕವಾಗಿ ವಿರೋಧ ಇದೆ,

ಮತಾಂತರ ಅನ್ನೋದು ನಾವು ಹುಟ್ಟಿನಿಂದ ಬಂದ ಧರ್ಮವೇ ನಮ್ಮ ಧರ್ಮ ಆಗಿರುತ್ತದೆ, ಆದ್ರೆ ಯಾರದೋ ಬಲವಂತಕ್ಕಾಗಿ, ಅಥವಾ ಎಮೋಷನಲ್ ಬ್ಲಾಕ್ ಮೇಲ್ ಆಗಲಿ, ಬೇರೆ ಬೇರೆ ಅನುಕೂಲ ಮಾಡೋದಾಗಿ, ಆಸೆ ಆಮಿಷ ಒಡ್ಡಿ ಮತಾಂತರ ಮಾಡೋದು ಕಾನೂನು ವಿರುದ್ಧ ಎಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಎಂ ಎಲ್ ಸಿ ತಾರಾ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಮಾಡುವಂತಹ ಕೆಲಸಕ್ಕೆ, ಯಾರಾದ್ರೂ ಕೈಹಾಕಿದ್ರೆ ಅದು ಶಿಕ್ಷೆಗೆ ಅರ್ಹ ಅನ್ನೋದು ನಮ್ಮ ಆಸೆ, ಎಲ್ಲರಿಗೂ ವೈಯಕ್ತಿಕವಾದ ನಿರ್ಧಾರ ಇರುತ್ತೆ, ಆದ್ರೆ ಯಾರದೋ ಬಲವಂತಕ್ಕೆ ಒಳಗಾಗಬಾರದು ಅನ್ನೋದು ಸರ್ಕಾರದ ಕಾಳಜಿ,

ಕಾಂಗ್ರೆಸ್ ಪ್ರತಿಭಟನೆ ಮಾಡಿದು ಅವರ ವೈಯಕ್ತಿಕ ವಿಚಾರ, ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಈ ಕಾಯ್ದೆ ಜಾರಿ ಆಗುತ್ತಿದೆ, ಯಾವುದೇ ಕುಟುಂಬ ಅಥವಾ ವೈಯಕ್ತಿಕವಾಗಿ ಸರ್ಕಾರ ಕೈಹಾಕಿಲ್ಲ, ಎನ್ ಆರ್ ಐ ಗಳ ಕೈವಾಡ ಇದರಲ್ಲಿ ಇದೆ, ಜೊತೆಗೆ ಬೇರೆ ಬೇರೆ ದೇಶಗಳ ಹಣ ಸಹಾಯ ಆಗ್ತಿದೆ ಅನ್ನೋ ಮಾಹಿತಿ ಇವೆ, ಆ ರೀತಿ ಇದ್ದರೂ ಇರಬಹುದು, ಮತಾಂತರ ಅದವರು ಯಾರೇ ಆಗಲಿ ಅವರು ಮತ್ತೆ ಅವರ ಧರ್ಮಕ್ಕೆ ಹೋಗೋಕೆ ಸ್ವತಂತ್ರ ಇದೆ ಎಂದರು.

Edited By : Shivu K
PublicNext

PublicNext

13/12/2021 12:26 pm

Cinque Terre

64.12 K

Cinque Terre

7

ಸಂಬಂಧಿತ ಸುದ್ದಿ