ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಧಾನ ಪರಿಷತ್ ದಲ್ಲಿ ಕನಿಷ್ಠ15 ಸೀಟ್ ಗಳನ್ನ ಗೆಲ್ಲುತ್ತೇವೆ- ಮಾಜಿ ಸಿಎಂ ಯಡಿಯೂರಪ್ಪ

ಹುಬ್ಬಳ್ಳಿ: ನಾಳೆ ವಿಧಾನ ಪರಿಷತ್ ಫಲಿತಾಂಶ ಬರುತ್ತೆ, ನಾವು 15 ಸೀಟ್ ಗಳನ್ನ ಕನಿಷ್ಠ ಗೆಲ್ಲುತ್ತೇವೆ, ಇದರಿಂದ ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತ ಸಾಬೀತು ಆಗುತ್ತೆ, ಜನ ನಮಗೆ ಆಶೀರ್ವಾದ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಚರ್ಚೆಗಳಿಗೆ ಮತ್ತು ಹಲವು ತೀರ್ಮಾನಗಳು ಆಗ್ತಾವೆ,

ಮತಾಂತರ ಕಾಯ್ದೆ ನಿಷೇಧ ಜಾರಿ ವಿಚಾರಕ್ಕೆ, ಕಾಂಗ್ರೆಸ್ ವಿರೋಧ ಇದ್ದೆ ಇರುತ್ತೆ, ನಮ್ಮ ಅಪೇಕ್ಷೆ ಸಹ ನಿಷೇಧ ಮಾಡೋದು ಇದೆ, ಹಲವು ರಾಜ್ಯಗಳಲ್ಲಿ ಮತಾಂತರ ಕಾಯ್ದೆ ಜಾರಿ ಆಗಿದೆ, ಮತಾಂತರ ನಿಷೇಧ ಕಾಯ್ದೆ ಇದೆ ಅಧಿವೇಶನದಲ್ಲಿ ಪಾಸ್ ಆಗಲಿದೆ, ಅಧಿವೇಶನ ಮುಗಿಯುವ ಕೇವಲ ಎರಡು ಮೂರು ದಿನಗಳ ಒಳಗೆ ಕಾಯ್ದೆ ಜಾರಿ ಆಗಲಿದೆ, ಇದಕ್ಕೆ ಕೇವಲ ನನ್ನ ಅಭಿಪ್ರಾಯ ಅಷ್ಟೇ ಅಲ್ಲ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆಡಳಿತ ಪಕ್ಷದವರು ಸೇರಿದಂತೆ ಸಂಸತ್ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆಯಲಾಗಿದೆ.

ಬಸವರಾಜ ಬೊಮ್ಮಾಯಿಗೆ ಬಿಜೆಪಿ ನಾಯಕರಿಂದ ಸಹಕಾರ ಸಿಗುತ್ತಿಲ್ಲ ಎನ್ನುವ ರಾಯರೆಡ್ಡಿ ಹೇಳಿಕೆ ವಿಚಾರದಲ್ಲಿ, ಅದರಲ್ಲಿ ಸತ್ಯಾಂಶ ಇಲ್ಲ, ಎಲ್ಲ ರೀತಿಯ ಸಹಕಾರ ಸಿಗುತ್ತಿದೆ, ಬಿಜೆಪಿಯಲ್ಲಿ ಅವರ ಅವಧಿಯನ್ನ ಬೊಮ್ಮಾಯಿ ಪೂರ್ಣಗೊಳಿಸುತ್ತಾರೆ ಎಂದರು.

Edited By : Manjunath H D
PublicNext

PublicNext

13/12/2021 12:14 pm

Cinque Terre

60.54 K

Cinque Terre

4

ಸಂಬಂಧಿತ ಸುದ್ದಿ