ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಗೋಮಾತೆಯ ರಕ್ಷಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ: ಸಚಿವ ಪ್ರಭು ಚೌಹಾನ್

ಉಡುಪಿ: ಉಡುಪಿಯ ಶ್ರೀಕೃಷ್ಣಮಠದಲ್ಲಿ ಗೋಪಾಲಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್,ಗೋಮಾತೆಯ ರಕ್ಷಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ.

ಯುಪಿ ಮುಖ್ಯಮಂತ್ರಿ ಯೋಗಿ ಅವರ ಜೊತೆ ಚರ್ಚೆ ಮಾಡಿ ಗೋ ನಿಷೇಧ ಕಾಯ್ದೆ ಜಾರಿ ಮಾಡಿದ್ದೇವೆ. ಸಾಕಷ್ಟು ಅಧ್ಯಯನ ಮಾಡಿಯೇ ಕಾಯ್ದೆ ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಕೆಲವರು ನ್ಯಾಯಾಲಯದಲ್ಲಿ ಪಿಐಎಲ್ ಹಾಕಿದ್ದಾರೆ ಎಂದು ಹೇಳಿದ ಅವರು,

ನ್ಯಾಯಾಲಯದಲ್ಲಿ ತೀರ್ಪು ಶೇಕಡ 100 ನಮ್ಮ ಪರ ಬರಲಿದೆ.

ಗೋಹತ್ಯಾ ನಿಷೇಧ ಕಾಯ್ದೆ ಸಂಪೂರ್ಣ ಜಾರಿಯಾಗುತ್ತದೆ. ಹೊಸ ಕಾಯ್ದೆ ಬಂದ ನಂತರ 10000 ಗೋವುಗಳನ್ನು ರಕ್ಷಿಸಲಾಗಿದೆ.ಆರುನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.

ಪೊಲೀಸ್ ಇಲಾಖೆ ಮತ್ತು ಗೃಹ ಸಚಿವರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದ ಸಚಿವರು, ಈ ಹಿಂದೆ ಕೇವಲ ಒಂದು ಸಾವಿರ ರೂಪಾಯಿ ದಂಡ ಇತ್ತು.

ಭವಿಷ್ಯದಲ್ಲಿ ದಂಡದ ಪ್ರಮಾಣ 50 ಸಾವಿರದಿಂದ 10 ಲಕ್ಷ ರೂಪಾಯಿ ಆಗಲಿದೆ.ತೀರ್ಪು ನಮ್ಮ ಪರವಾಗಿ ಬಂದನಂತರ ಗೋಹತ್ಯೆ ಹೇಗೆ ಆಗುತ್ತೆ ನೋಡೋಣ.

ದಂಡದ ಪ್ರಮಾಣ ಹೆಚ್ಚಾದರೆ ಯಾರು ಗೋಹತ್ಯೆ ಮಾಡುತ್ತಾರೆ? ಏಳು ವರ್ಷಗಳ ಜೈಲುವಾಸಕ್ಕೂ ಕಾಯಿದೆಯಲ್ಲಿ ಅವಕಾಶವಿದೆ.

ಪ್ರತೀ ತಾಲೂಕಿಗೆ ಒಂದು ಸುಸಜ್ಜಿತ ಆಂಬುಲೆನ್ಸ್ ನೀಡುತ್ತೇವೆ. ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭಿಸಿದ್ದೇವೆ.

ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸುತ್ತೇವೆ,50ರಿಂದ 100 ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು.

Edited By : Shivu K
PublicNext

PublicNext

12/12/2021 04:48 pm

Cinque Terre

53.47 K

Cinque Terre

10

ಸಂಬಂಧಿತ ಸುದ್ದಿ