ತಮಕೂರು: ಕೆರೆ ಕಟ್ಟೆಗಳನ್ನ ತುಂಬಿಸೋದು ನನ್ನ ಮಹದಾಸೆ ಆಗಿತ್ತು. ಮಳೆರಾಯನ ಕೃಪೆ ಮತ್ತು ನನ್ನ ಪರಿಶ್ರಮದಿಂದ ಈಗ ಎಲ್ಲ ಕೆರೆಗಳು ತುಂಬಿವೆ ಎಂದು ಸಚಿವ ಮಾಧುಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
"ಏನೈತಪ್ಪಾ ನಿನ್ನ ಬಾಯಲ್ಲಿ.ಅದ್ಯಾವ್ ಬಾಯಲ್ಲಿ ಅಂದಿದ್ಯೋ.ಎಲ್ಲಾ ಕೆರೆ ತುಂಬಿಸ್ತಿನಿ ಅಂತಾ.
ಮಳೆನೇ ಬಂದು ಎಲ್ಲಾ ಕೆರೆ ತುಂಬಿ ಹೊಯ್ತು " ಅಂದ್ಳು.ಆ ಮಹಾತಾಯಿಯ ಹಾರೈಕೆ ಕಂಡು ನನ್ನ ಮನಸ್ಸು ತುಂಬಿ ಬಂತು ಎಂದು ತಾಯಿಯೊಬ್ಬರು ಹೇಳಿದ ಮಾತನ್ನ ಸಚಿವ ಮಾಧುಸ್ವಾಮಿ ಇಲ್ಲಿ ನೆನಪಿಸಿಕೊಂಡಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ 231 ಕೆರೆಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆಕೊಟ್ಟು ಮಾತನಾಡಿದ ಮಾಧುಸ್ವಾಮಿ,
ಕಳೆದ ಚುನಾವಣೆಯಲ್ಲಿ ನಾನು ಮಾತುಕೊಟ್ಟಿದೆ. ಅದರಂತೆ ಪರಿಶ್ರಮ ಪಟ್ಟಿದ್ದೇನೆ. ಅದಕ್ಕೆ ವರುಣ ಕೃಪೆ ಕೂಡ ಇದೆ. ಆದ್ದರಿಂದಲೇ ಈಗ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ ಅಂತ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಗಟ್ಟಿ ಸ್ವಭಾವದ ಸಚಿವ ಮಾಧುಸ್ವಾಮಿ.
PublicNext
12/12/2021 04:43 pm