ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೆಂಟ್‌ ತೆರವುಗೊಳಿಸಿ ಊರಿನತ್ತ ಪ್ರಯಾಣ

ದೆಹಲಿ: ಒಂದು ವರ್ಷ ಮನೆ ಮಠ ಊರು ಕೇರಿ ಬಿಟ್ಟು ಪ್ರತಿಭಟನಾ ಸ್ಥಳದಲ್ಲೇ ಇದ್ದ ರೈತರು ಕೊನೆಗೂ ಊರ ಕಡೆ ಹೊರಟಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷ ಕಾಲ ರೈತರು ನಡೆಸಿದ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ನಡೆದ ಸುದೀರ್ಘ ಪ್ರತಿಭಟನೆಯನ್ನು ಹಿಂಪಡೆದ ರೈತರು ತಮ್ಮ ತಮ್ಮ ಊರ ಕಡೆ ಪ್ರಯಾಣ ಬೆಳೆಸಿದ್ದಾರೆ.

ದೆಹಲಿಯ ಘಾಜಿಯಾಬಾದ್‌ ಗಡಿಗಳಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಟೆಂಟ್‌ಗಳನ್ನು ತೆರವುಗೊಳಿಸಿದ್ದಾರೆ. ಇಷ್ಟು ದಿನಗಳವರೆಗೆ ಪ್ರತಿಭಟನೆ ನಡೆಸಿದ ಸ್ಥಳವನ್ನೆಲ್ಲಾ ಸ್ವಚ್ಛಗೊಳಿಸಿ ತಮ್ಮ ವಸ್ತುಗಳನ್ನೆಲ್ಲಾ ವಾಹನಗಳಲ್ಲಿಸಿರಿ ಖುಷಿಯಿಂದ ರೈತರು ಊರುಗಳತ್ತ ಹೊರಟಿದ್ದಾರೆ. ಕಳೆದ ವಾರ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದ್ರು.

Edited By : Nagesh Gaonkar
PublicNext

PublicNext

11/12/2021 03:23 pm

Cinque Terre

31.74 K

Cinque Terre

2