ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಷತ್ ಫೈಟ್ : ಮತ ಪೆಟ್ಟಿಗೆ ಸೇರಿದ ಅಭ್ಯರ್ಥಿಗಳ 'ಬಲಾಬಲ'; ಶೇ.99 ಮತದಾನ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಚುನಾವಣೆ ಇಂದು ಜರುಗಿತು.

ಅಲ್ಲಲ್ಲಿ ಕೆಲವೊಂದು ಸಣ್ಣ - ಪುಟ್ಟ ಘಟನೆಗಳ ಹೊರತಾಗಿ ಮತದಾನ ಬಹುತೇಕ ಶಾಂತಯುತವಾಗಿ, ಯಶಸ್ವಿಯಾಗಿ ನಡೆದಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. 91 ಅಭ್ಯರ್ಥಿಗಳ ಭವಿಷ್ಯ‌‌‌ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಮೇಲ್ಮನೆಯಲ್ಲಿ ಪಕ್ಷದ ಬಲಾಬಲ ಹೆಚ್ಚಿಸಿಕೊಳ್ಳುವ ಸಲುವಾಗಿ ಈ ಚುನಾವಣೆ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಗೆ ಮಹತ್ವದ್ದಾಗಿದೆ.

ಬೆಂಗಳೂರು ನಗರ ಕ್ಷೇತ್ರದಲ್ಲಿ ಶೇ.100ರಷ್ಟು , ಬೆ.ಗ್ರಾಮಾಂತರ ಶೇ.99 ಶಿವಮೊಗ್ಗ , ಉತ್ತರ ಕನ್ನಡ ಶೇ.99 ಕೊಡಗು,ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಚಾಮರಾಜನಗರ, ಮಂಡ್ಯ, ಧಾರವಾಡ ಸೇರಿದಂತೆ ಉಳಿದ ಬಹುತೇಕ ಜಿಲ್ಲೆಯಲ್ಲಿ ಶೇ.99 ರಷ್ಟು ಮತದಾನ ಆಗಿದೆ.

ಇಂದು 25 ಕ್ಷೇತ್ರದಲ್ಲಿ 7 ಮಂದಿ ಪಂಚಾಯತ್ ಸದಸ್ಯರು ಮತದಾನ ಮಾಡಿಲ್ಲ.

6 ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿದ್ದು, ದ್ವಿಸದಸ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿಯಿಂದ ಒಬ್ಬರನ್ನೇ ಕಣಕ್ಕಿಳಿಸಲಾಗಿತ್ತು.

Edited By :
PublicNext

PublicNext

10/12/2021 09:44 pm

Cinque Terre

99.01 K

Cinque Terre

0

ಸಂಬಂಧಿತ ಸುದ್ದಿ