ಹಾಸನ: ಬೇಕೇ ಬೇಕು ಕಾರಿನಿಂದ ಕೆಳಗೆ ಇಳಿಯಲೇ ಬೇಕು ಎಂದು ಕೂಗಾಡುತ್ತಿರುವ ಸಿದ್ದು ಅಭಿಮಾನಿಗಳು. ಹೌದು ಇಂತಹ ದೃಶ್ಯ ಕಂಡು ಬಂದದ್ದು ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ.
ಇಂದು ಖಾಸಗಿ ಕಾರ್ಯಕ್ರಮಕ್ಕೆ ಅರಕಲಗೂಡಿಗೆ ಸಿದ್ದರಾಮಯ್ಯ ಹೋಗುವ ಮುನ್ನ ದೊಡ್ಡಹಳ್ಳಿ ಗ್ರಾಮದಲ್ಲಿ ಕಾದು ನಿಂತಿದ್ದರು ಸಿದ್ದು ಅಭಿಮಾನಿಗಳು. ಸಿದ್ದರಾಮಯ್ಯ ಬಂದ ತಕ್ಷಣ ಕಾರಿನಲ್ಲೇ ನಿಂತು ಅಭಿಮಾನಿಗಳಿಗೆ ವಿಶ್ ಮಾಡಿದ್ರು. ತಮಗೆ ತೊಡಿಸಿದ ಮೈಸೂರು ಪೇಟ ತೆಗೆದು ತೋರಿಸುತ್ತ ವಿಶ್ ಮಾಡಿದರು.
ಆದರೆ ಕಾರಿನಿಂದ ಕೆಳಗಿಳಿಯದೆ ಸಿದ್ದರಾಮಯ್ಯ ವಿಶ್ ಮಾಡಿದನ್ನು ನೋಡಿ ನೆಚ್ಚಿನ ನಾಯಕನ ಮಾತು ಕೇಳಲು ಕೆಳಗಿಳಿದು ಭಾಷಣ ಮಾಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಆದರೆ ಕಾರಿಂದ ಕೆಳಗಿಳಿಯದೇ ಸಿದ್ದರಾಮಯ್ಯ ಮುಂದೆ ಸಾಗಿದ್ದಾರೆ.
ಸುಮಾರು ಹದಿನೈದು ನಿಮಿಷ ಸಿದ್ದರಾಮಯ್ಯ ಕಾರಿನ ಮುಂದೆ ಬಿಡದೇ ಅಭಿಮಾನಿಗಳು ಕೆಳಗಿಳಿದು ಬರುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
PublicNext
08/12/2021 03:36 pm