ಮಂಡ್ಯ : ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳಯಲು 'ಕೈ' ಅಭ್ಯರ್ಥಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸೀರೆ,ಪಂಚೆ ಹಂಚಿರುವುದು ಬೆಳಕಿಗೆ ಬಂದಿದೆ.
ಹೌದು ಮಂಡ್ಯ ಕೈ ಅಭ್ಯರ್ಥಿ ದಿನೇಶ್ ಗೂಳಿಗೌಡ ವಸ್ತ್ರ ಕೊಟ್ಟು ಮತ ಸೆಳೆಯುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮಹಿಳೆಯರಿಗೆ ಸೀರೆ, ಅರಿಸಿಣ-ಕುಂಕುಮ, ಪುರುಷ ಮತದಾರರಿಗೆ ರೇಷ್ಮೆ ದೋತಿ ಸೆಟ್ ಗಿಫ್ಟ್ ನೀಡಿದ್ದಾರೆ ಜೊತೆಗೆ ದೇವರ ಫೋಟೋ ಕೊಟ್ಟು ಮತದಾರರನ್ನ ಕಟ್ಟಿ ಹಾಕುವ ಯತ್ನ ಮಾಡಿದ್ದಾರೆ.
ಸದ್ಯ ಕಾಂಗ್ರೆಸ್ ಅಭ್ಯರ್ಥಿಯ ಭಿತ್ತಿಚಿತ್ರ, ಮಾದರಿ ಮತಪತ್ರದ ಜೊತೆಗೆ ಬಟ್ಟೆ ಗಿಫ್ಟ್ ಫೋಟೋ ವೈರಲ್ ಆಗಿವೆ.
PublicNext
08/12/2021 09:39 am