ಮಂಡ್ಯ: ನಾನು ಪ್ರಧಾನಿಯಾಗಿತ್ತೇನೆಂದು ಯಾವತ್ತೂ ಅಂದುಕೊಂಡವನಲ್ಲ. ನಾನೊಬ್ಬ ಸಾಮಾನ್ಯ ಹಳ್ಳಿ ರೈತನ ಮಗ. ನಾನು ದೆಹಲಿಗೆ ಹೋದಾಗ ನನಗೆ ಯಾರೂ ಒಂದು ಗ್ಲಾಸ್ ಕಾಫಿ ಕೂಡ ಕೊಡಲಿಲ್ಲ ಎಂದು ಮಾಜಿ ಪ್ರದಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ಬಿಜೆಪಿಯ ವಾಜಪೇಯಿ ನೇತೃತ್ವದ ಸರ್ಕಾರ ಬಿದ್ದಾಗ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಸರ್ಕಾರ ರಚನೆಗಾಗಿ ನನ್ನನ್ನು ಸಂಪರ್ಕ ಮಾಡಿದರು. ಒತ್ತಾಯ ಮಾಡಿ ಅಂದು ನನ್ನನ್ನು ಆ ಸ್ಥಾನದಲ್ಲಿ ಕೂರಿಸಿದರು. ಆಮೇಲೆ ಅಲ್ಲಿ ನಾನೇನು ಮಾಡಿದೆ ಎಂಬುದನ್ನು ಹೇಳಲು ಇಚ್ಛಿಸುವುದಿಲ್ಲ. ನಾನು ರಾಷ್ಟ್ರ ರಾಜಕಾರಣಕ್ಕೆ ಹೋದ ಮೇಲೆ ನಮ್ಮ ಪಕ್ಷ 16ರಿಂದ ಕೇವಲ 2 ಸ್ಥಾನಕ್ಕೆ ಕುಸಿಯಿತು. ನನ್ನ ರಾಜಕೀಯ ಜೀವನದಲ್ಲಿ ನನಗೆ ಬಲ ತುಂಬಿದ್ದು ಹಾಸನ. ಅದು ಬಿಟ್ಟರೆ ಮಂಡ್ಯ ಜಿಲ್ಲೆ. ಹೀಗಾಗಿ ಮಂಡ್ಯಕ್ಕೆ ಬಂದಿದ್ದೇನೆ. ಒಬ್ಬ ರೈತನ ಮಗ ಪ್ರಧಾನಿಯಾಗಿ ಮಾಡಿರುವ ಕೆಲಸದ ಬಗ್ಗೆ ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ. ನಾನು ಅಂದು ದೆಹಲಿಗೆ ಹೋದಾಗ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ ಎಂದು ದೇವೇಗೌಡ ಸ್ಮರಿಸಿಕೊಂಡರು.
PublicNext
05/12/2021 10:27 pm