ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಗೆ ಕಮಿಷನ್, ಜೆಡಿಎಸ್‌ಗೆ ಕುಟುಂಬ ರಾಜಕೀಯವೇ ಮುಖ್ಯ: ಕೃಷ್ಣಬೈರೇಗೌಡ

ಕೋಲಾರ: ಬಿಜೆಪಿಗೆ ಕಮಿಷನ್ ಹಾಗೂ ಜೆಡಿಎಸ್‌ಗೆ ಕುಟುಂಬ ರಾಜಕೀಯವೇ ಮುಖ್ಯ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ದೂರಿದ್ದಾರೆ.

ಕೋಲಾರ ಕಾಂಗ್ರೆಸ್ ಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಪರವಾಗಿ ಮಾಲೂರಿನಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನೇರವಾಗಿ ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು. ರಾಜ್ಯ ಹಾಗೂ ಜಿಲ್ಲೆಗಳಿಗೆ ಬಿಜೆಪಿ, ಜೆಡಿಎಸ್ ಕೊಡುಗೆ ಏನೆಂದು ಪ್ರಶ್ನಿಸಿದ ಅವರು, "ಕೋಲಾರ ಸೇರಿದಂತೆ ಹಲವು ಜಿಲ್ಲೆಗಳನ್ನು ಎರಡೂ ಪಕ್ಷಗಳು ನಿರ್ಲಕ್ಷ್ಯ ಮಾಡಿದೆ. ನೀರಾವರಿ ಯೋಜನೆಗಳನ್ನು ಜಾರಿಗೆ ಮಾಡಿದ್ದು ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಅಧಿಕಾರದಲ್ಲಿರೊ ಬಿಜೆಪಿ ಸರ್ಕಾರ ಕಮೀಷನ್ ಪಡೆಯುವುದರಲ್ಲಿ ತಲ್ಲೀನವಾಗಿದೆ" ಎಂದರು.

ಜೆಡಿಎಸ್ ನವರು ತಮ್ಮ ಕುಟುಂಬದ ಅಭಿವೃದ್ಧಿಯ ಹಿಂದೆ ಬಿದ್ದಿದ್ದಾರೆ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‍ಗೆ ಅಧಿಕಾರ ಸಿಕ್ಕಿತ್ತು. ಆಗಲೂ ಅವರಿಂದ ಏನೂ ಕೊಡುಗೆ ಸಿಕ್ಕಿಲ್ಲ. ಮುಂದೆಯು ಇಂತಹವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯದಲ್ಲಿ ಏನಾದರು ಒಂದು ಅಭಿವೃದ್ಧಿ ಆಗಬೇಕಿದ್ದರು ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

Edited By : Vijay Kumar
PublicNext

PublicNext

05/12/2021 10:08 am

Cinque Terre

28.39 K

Cinque Terre

5

ಸಂಬಂಧಿತ ಸುದ್ದಿ