ಕೋಲಾರ : ಜೆಡಿಎಸ್, ಬಿಜೆಪಿಯ ಬಿ ಟೀಮ್ ಅಂತರಾ ಆದ್ರೆ ನಮ್ಮ ಮನೆ ಬಾಗಿಲು ಕಾಯುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಹೆಚ್ ಡಿಕೆ ಕಾಂಗ್ರೆಸ್ ನವರು ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಅಂತಾ ಕತ್ತಿಗೆ ಸ್ಲೇಟ್ ಹಾಕಿಕೊಂಡು ದಿನ ಓಡಾಡಲಿ ಅದು ಈ ರೀತಿ ಮಾತನಾಡುತ್ತಿರುವುದು ಇಂದು ನಿನ್ನೆಯದಲ್ಲಾ, 2018 ರಿಂದಲೇ ಕಾಂಗ್ರೆಸ್ ಪಕ್ಷ ಜೆಡಿಎಸ್ ಬಗ್ಗೆ ಆರೋಪ ಮಾಡುತ್ತಲೆ ಬರುತ್ತಿದೆ. ಕಾಂಗ್ರೆಸ್ ನ ನಡವಳಿಕೆ ಬಗ್ಗೆ ನಾಡಿನ ಜನತೆಗೆ ಬಿಟ್ಟಿದ್ದೇನೆ ಎಂದರು.
ಇನ್ನು ದೇವೇಗೌಡರು ಒಬ್ಬ ಜನಪ್ರತಿನಿಧಿಯಾಗಿ, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪಿಎಂ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ ರಾಜಕೀಯ ಬೆರೆಸಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ.
ಬಿಜೆಪಿ ಹಣದ ಮುಖಾಂತರ ಗೆಲುವಿನ ಅನುಭವವನ್ನು ಪಡೆದಿದೆ. ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಚುನಾವಣೆ ಮಾಡುವುದು ಅಭ್ಯಾಸವಾಗಿದೆ. ಜನ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ನ್ನು ಮುಗಿಸಲು ಮುಂದಾಗಿವೆ. 2023 ರಲ್ಲಿ ಜೆಡಿಎಸ್ ಪಕ್ಷ ಏನೆಂದು ತೋರಿಸುತ್ತೇವೆ ಎಂದರು. ಸದ್ಯ ಒಮಿಕ್ರಾನ್ ಬಗ್ಗೆ ಸಭೆಗಳನ್ನು ನಡೆಸದೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
PublicNext
03/12/2021 05:01 pm