ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.14ಕ್ಕೆ ಡಿಕೆಶಿ ವ್ಯಕ್ತಿತ್ವ ಬಯಲು ಮಾಡುತ್ತೇನೆ : ಗುಡುಗಿದ ಸಾಹುಕಾರ

ಬೆಳಗಾವಿ : ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು ಅದಕ್ಕಾಗಿ ನಾವು ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪರ್ತಕರ್ತರ ಪ್ರಶ್ನೆವೊಂದಕ್ಕೆ ಉತ್ತರಿಸುತ್ತಾ ನಿಮಗೆ ಬೇಕಿರೋ ಉತ್ತರ ಇಂದು ಸಿಗಲ್ಲ. ಪರಿಷತ್ ಫಲಿತಾಂಶ ದಿನ ಡಿ14ರಂದು ಡಿಕೆಶಿ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ.

ಅತ್ಯಂತ ಕಠೊರವಾಗಿ ಉತ್ತರ ಕೊಡ್ತಿನಿ. ನಾವು ಈಗ ಚುನಾವಣೆ ಮೂಡನಲ್ಲಿ ಇದ್ದೇವೆ ಎಂದು ಹತಾಶೆ ಮನೋಭಾವದಿಂದ ಡಿಕೆಶಿ ಟೀಕೆ ಮಾಡಿದ್ದಾರೆ.

1985 ರಿಂದ ಇಲ್ಲಿಯ ವರೆಗೆ ನಡೆದ ಎಲ್ಲಾ ವಿಚಾರ ಬಹಿರಂಗ ಮಾಡ್ತಿನಿ. ನನ್ನ ವ್ಯಕ್ಯಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳ್ತಿನಿ. ಒಪನ್ ವಾರ್ ಆಗಲಿ ಅಂದು ಫಲಿತಾಂಶದ ದಿನ ಎಲ್ಲಕ್ಕೂ ಉತ್ತರ ದೊರೆಯಲಿದೆ. ಡಿಕೆಶಿ ಕುಟುಂಬ, ಜಾರಕಿಹೊಳಿ ಕುಟುಂಬ ಎನಿತ್ತು ಎಲ್ಲಾ ಬಹಿರಂಗ ಮಾಡುತ್ತೇನೆ ಎಂದರು.

ದೆಹಲಿ ವರಿಷ್ಠರ ಆಶೀರ್ವಾದ ನನ್ನ ಮೇಲೆ ಇದೆ. ವರಿಷ್ಠರು ಇದ್ದಾರೆ ಎಂದು ನಾನು ಜೀವಂತ ಇದ್ದೇನೆ. ಇಲ್ಲವೇ ಇಷ್ಟೊತ್ತಿಗೆ ನನ್ನನು ಮುಗಿಸಿ ಬಿಡುತ್ತಿದ್ದರು ಇಷ್ಟೊತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತೇನೆ ಎಂದರು.

14 ರಂದು ಡಿಕೆಶಿ, ಜಾರಕಿಹೊಳಿ ವಾರ್ ಆಗಲಿ ನೋಡೋಣ. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ನಾವು ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

Edited By : Shivu K
PublicNext

PublicNext

01/12/2021 07:45 pm

Cinque Terre

79.8 K

Cinque Terre

19

ಸಂಬಂಧಿತ ಸುದ್ದಿ