ಕೊಪ್ಪಳ: ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆದರು. ಆದರೆ ನಮ್ಮ ಗ್ರಹಚಾರಕ್ಕೆ ನಾಲ್ಕು ಬಾರಿನೂ ಪೂರ್ಣ ಬಹುಮತ ಸಿಗಲೇ ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಕೊಪ್ಪಳದ ಕಾರಟಗಿಯ ವಿಧಾನ ಪರಿಷತ್ ಚುನಾವಣೆ ಪ್ರಚಾರದಲ್ಲ ಈಶ್ವರಪ್ಪ ಹೀಗೆ ಹೇಳಿದ್ದಾರೆ. ಇದೇ ವೇಳೆ ಈಶ್ವರಪ್ಪ ತಮ್ಮ ಪಕ್ಷದ ಆಪರೇಷನ್ ಕಮಲದ ಬಗ್ಗೇನೂ ತಾವೇ ಟೀಕಿಸಿದ್ದಾರೆ. ಆಪರೇಷನ್ ಕಮಲಕ್ಕೆ ಅವರನ್ನು ಕರೆದುಕೊಂಡು ಬಾ ಇವನು ಕರೆದುಕೊಂಡು ಬಾ ಅಂತ ದುಡ್ಡು ಕೊಡೋದೇ ಆಯಿತು ಅಂತಲೂ ಆಪರೇಷನ್ ಕಮಲದ ದುಡ್ಡಿನ ರಹಸ್ಯ ಬಿಚ್ಚಿಟ್ಟಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆಯೋ ದುಡ್ಡಿನ ವ್ಯವಹಾರ ಇನ್ನಾವ ಚುನಾವಣೆಯಲ್ಲೂ ನಡೆಯೋದಿಲ್ಲ.ಮುಕ್ಕಾಲು ಪಾಲು ಚುನಾವಣೆಯಲ್ಲಿ ದುಡ್ಡಿನದೇ ವ್ಯವಹಾರ. ನೀವೂ ಯಾರು ದುಡ್ಡು ಕೊಡ್ತಾರೋ ಅವರಿಂದ ತೆಗೆದುಕೊಳ್ಳಿ. ಆದರೆ ವೋಟ್ ಯಾರಿಗೆ ಹಾಕೋದು ಅನ್ನೋದು ನಿಮಗೆ ಬಿಟ್ಟದ್ದು ಅಂತಲೂ ಪ್ರಚಾರದಲ್ಲಿ ಜನಕ್ಕೆ ಹೇಳಿದ್ದಾರೆ.
PublicNext
29/11/2021 07:56 pm