ದಾವಣಗೆರೆ:ಸಚಿವ ಈಶ್ವರಪ್ಪ ಅವರ ಆ ಒಂದು ಹೇಳಿಕೆ ಈಗ ಬಿಜೆಪಿಯಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.ಆದರೆ ಈ ಒಂದು ಹೇಳಿಕೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಏನ್ ಹೇಳಿದ್ದಾರೆ ಗೊತ್ತೇ ? ಬನ್ನಿ, ನೋಡೋಣ.
ಈಶ್ವರಪ್ಪ ಇತ್ತೀಚಿಗೆ ಅತೀ ಶೀಘ್ರದಲ್ಲಿಯೆ ನಿರಾಣೆ ಸಿಎಂ ಆಗ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು.ಈ ಒಂದು ಹೇಳಿಕೆಗೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈಶ್ವರಪ್ಪ ತಮಾಷೆಯಾಗಿಯೇ ಈ ಮಾತು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ಮತ್ತಿನ್ನೇನಿದೆ ಅಂತಲೇ ತಿಳಿಸಿದ್ದಾರೆ.
ಎಂಎಲ್‌ಸಿ ಚುನಾವಣೆಯಲ್ಲಿ 25 ಕ್ಷೇತ್ರದಲ್ಲಿ 20 ಸ್ಥಾನಕ್ಕೆ ಸ್ಪರ್ಧಿಸಿದ್ದೇವೆ.15 ಸ್ಥಾನಗಳಲ್ಲಿ ನಾವೇ ಗೆಲ್ಲುತ್ತೇವೆ.ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ನಾವೇ ಗೆಲ್ಲೋದು.ಅಷ್ಟೇ ಅಲ್ಲ 140 ಕ್ಕೂ ಹೆಚ್ಚು ಸ್ಥಾನಗಳನ್ನ ಗೆದ್ದೇ ಗೆಲುತ್ತೇವೆ ಅಂತಲೂ ತಳಿಸಿದ್ದಾರೆ ಬಿಎಸ್ ಯಡಿಯೂರಪ್ಪ.
PublicNext
29/11/2021 05:55 pm