ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ನನ್ನ ಮೇಲಿನ ಅಭಿಮಾನಕ್ಕಾಗಿ ಮುಂದಿನ ಸಿಎಂ ನಾನೇ ಎಂದು ಈಶ್ವರಪ್ಪ ಹೇಳಿದ್ದಾರೆ: ನಿರಾಣಿ

ಬಾಗಲಕೋಟೆ: ಮುರಗೇಶ್ ನಿರಾಣಿ ಅವರು ಮುಂದಿನ ಸಿಎಂ ಆದರೂ ಆಗಬಹುದು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಿರಾಣಿ, ಈ ಹೇಳಿಕೆ ಎಲ್ಲೆಡೆ ಪ್ರಚಾರಗೊಂಡಿದ್ದನ್ನ ನಾನು ಗಮನಿಸಿದ್ದೇನೆ. ಸಚಿವ ಈಶ್ವರಪ್ಪನವರು ಅಭಿಮಾನ ಪೂರ್ವಕವಾಗಿ ಹಾಗೆ ಹೇಳಿದ್ದಾರೆ ಎಂದಿದ್ದಾರೆ.

ನಮ್ಮ ಹಿರಿಯ ಸಹೋದರ ಬಸವರಾಜ್ ಬೊಮ್ಮಾಯಿ ರಾಜ್ಯದ ಸಿಎಂ ಆಗಿ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರು 2023ರ ವರೆಗೆ ಸಿಎಂ ಆಗಿರುತ್ತಾರೆ. ನಮ್ಮ ಗುರಿ ಇರುವಂತದ್ದು 2023ಕ್ಕೆ ಕ್ಲಿಯರಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಮುರಗೇಶ್ ನಿರಾಣಿ ಹೇಳಿದ್ದಾರೆ.

Edited By : Manjunath H D
PublicNext

PublicNext

29/11/2021 03:55 pm

Cinque Terre

53.92 K

Cinque Terre

0

ಸಂಬಂಧಿತ ಸುದ್ದಿ