ಶಿವಮೊಗ್ಗ: ಕಾಂಗ್ರೆಸ್ ಪಕ್ಷ 100 ರಿಂದ 125 ವರ್ಷದ ಪಕ್ಷ. ಸ್ವಾತಂತ್ರ್ಯ ಬಂದ ನಂತರ 65 ವರ್ಷ ಈ ದೇಶದಲ್ಲಿ ಆಳ್ವಿಕೆ ನಡೆಸಿ, ಈ ದೇಶದ ಎಲ್ಲಾ ಸಾಲವನ್ನು ಹೀರಿ ಹೀರಿ ರುಚಿ ಕಂಡುಕೊಂಡು ಬಿಟ್ಟಿದ್ದಾರೆ. ಈಗ ಸೋತು ಸುಣ್ಣ ಆಗಿದ್ದಾರೆ. ಮುಂದೊಂದು ದಿನ ಇಡೀ ದೇಶದಲ್ಲಿ ಬ್ಯಾಟರಿ ಹಾಕಿಕೊಂಡು ಹುಡುಕಿದರೂ ಅವರು ಸಿಗುವುದಿಲ್ಲ. ಕಾಂಗ್ರೆಸ್ ಪಕ್ಷ ಒಂದು ರೀತಿಯ ಅತೃಪ್ತ ಆತ್ಮ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರದ ಗಾಂಧಿ ಮೈದಾನದಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‍ನವರಿಗೆ ಬೇರೆ ವಿಷಯಗಳೇ ಇಲ್ಲ. ಹೀಗಾಗಿಯೇ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳ ವಿರುದ್ಧ ಏನೇನೋ ಹೇಳಿಕೊಂಡು ಓಡಾಡುತ್ತಿದ್ದಾರೆ. ಮೊನ್ನೆ ಮೊನ್ನೆಯವರೆಗೆ ಬಿಟ್ ಕಾಯಿನ್ ಬಗ್ಗೆ ಮಾತನಾಡುತ್ತಿದ್ದರು. ಅದರಿಂದ ಏನು ಪ್ರಯೋಜನ ಆಗಲಿಲ್ಲ ಅದಕ್ಕೆ ಆ ವಿಷಯವನ್ನೆ ಬಿಟ್ಟು ಬಿಟ್ಟರು ಎಂದರು.
PublicNext
29/11/2021 07:50 am