ರಾಜಕಾರಣಿಗಳ ಆಟಗಳನ್ನ ಬಲ್ಲವರಾರು ? ತೆರೆ ಮೇಲೆ ಒಂದು ಆಟ. ತೆರೆ ಹಿಂದೆ ಮತ್ತೊಂದು ಆಟ. ಇಲ್ಲಿ ಪಕ್ಷ-ಪಕ್ಷಗಳ ನಡುವೆ ಹೋರಾಟ ಇರುತ್ತದೆ. ವ್ಯಕ್ತಿ-ವ್ಯಕ್ತಿ ನಡುವೆ ಹೋರಾಟ ಇರೋದೇ ಇಲ್ಲ. ಇದಕ್ಕೆ ಇಲ್ಲೊಂದು ಸಾಕ್ಷಿ ಇದೆ. ಅದು ವೀಡಿಯೋ ರೂಪದಲ್ಲಿಯೇ ಇದೆ. ನೋಡಿ.
ಭಾರತೀಯ ಜನತಾ ಪಾರ್ಟಿಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದ್ದಾರೆ. ಮತ್ತೊಂದು ಕಡೆಗೆ ತೃಣಮೂಲ ಕಾಂಗ್ರೆಸ್ ನ ಸುದೀಪ್ ಬಂಡೋಪಾಧ್ಯಾಯ ಇದ್ದಾರೆ. ಇವರ ಈ ವೀಡಿಯೋನೆ ಗಮನ ಸೆಳೆಯುತ್ತಿದೆ. ಅಂದ್ಹಾಗೆ ಇಲ್ಲಿ ಸುದೀಪ್ ಬಂಡೋಪಾಧ್ಯಾಯ ವೀಡಿಯೋ ಕಾಲ್ ನಲ್ಲಿಯೇ ನಿರತರಾಗಿದ್ದಾರೆ.
ಈ ಸಮಯದಲ್ಲಿಯೇ ಹಿಂದಿನಿಂದ ಬಂದ ರಾಜನಾಥ್ ಸಿಂಗ್ ಎರಡೂ ಕೈಗಳಿಂದ ಸುದೀಪ್ ಬೆನ್ನು ಟಚ್ ಮಾಡಿ ಭಯಪಡಿಸುತ್ತಾರೆ. ತಕ್ಷಣವೇ ಹಿಂದಕ್ಕೆ ತಿರುಗುವ ಸುದೀಪ್ ,ರಾಜನಾಥ್ ಮುಖ ನೋಡಿ ನಕ್ಕು ಬಿಡ್ತಾರೆ. ಆಗ ರಾಜನಾಥ್ ಮುಂದುವರೆಯಲಿ ನಿಮ್ಮ ಕೆಲಸ ಅಂತ ಹೇಳಿ ಅಲ್ಲಿಂದ ಹೊರಟು ಬಿಡ್ತಾರೆ. ಇದು ಒಂದು ರೀತಿ ಇವರ ಆತ್ಮೀಯ ಆಟವೇ ಆಗಿದೆ. ನೋಡುಗರಿಗೂ ಇವರೆಲ್ಲ ಒಂದೇ ಅನ್ನೋ ರೀತಿಯಲ್ಲೂ ಈ ವೀಡಿಯೋ ಇದೆ.
PublicNext
28/11/2021 10:40 pm