ಚಿತ್ರದುರ್ಗ:ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ ಎಂದು ವಿವಾದಾತ್ಮಕ ಹೇಳಿಕೆಯನ್ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಿತ್ರದುರ್ಗದಲ್ಲಿ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಬಡ್ತಿ ನೀಡುವ ಪಕ್ಷ ಎಂದು ನಳಿನ್ ಕುಮಾರ್ ಕಟೀಲ್ ಟೀಕೆ ಮಾಡಿದ್ದರು. ಅದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯ, ನಳಿನ್ ಕುಮಾರ್ ಒಬ್ಬ ಭಯೋತ್ಪಾದಕ,ಈ ಕಟೀಲ್ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಅಂತಲೂ ಟೀಕಿಸಿದ್ದಾರೆ.
ರಾಜ್ಯದ ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಅವರು ಬಿಜೆಪಿಯನ್ನ ಕಿತ್ತೊಗೆಯುತ್ತಾರೆ ಅಂತಲೂ ಹೇಳಿಕೆ ಕೊಟ್ಟಿದ್ದಾರೆ. ಇನ್ನು ನಾವು A-ಟೀಂ ಅಲ್ಲ, B-ಟೀಂ ಅಲ್ಲ ಎಂಬ HDK ಹೇಳಿಕೆಯನ್ನೂ ಟೀಕಿಸಿದ ಸಿದ್ದರಾಮಯ್ಯ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಎಲ್ಲೆಡೆ ಯಾಕೆ ಅಭ್ಯರ್ಥಿಗಳನ್ನ ಯಾಕಿಲ್ಲ ಹೇಳಿ ಅಂತಲೂ ಪ್ರಶ್ನೆ ಮಾಡಿದ್ದಾರೆ.
PublicNext
28/11/2021 04:52 pm