ಬೆಂಗಳೂರು: ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದ ಆರೋಪಿಸಿ ರಾಜ್ಯದ ಕೆಲ ಗುತ್ತಿಗೆದಾರರು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಗುತ್ತಿಗೆದಾರರು ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದ್ದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರು, ಪ್ರಧಾನಿ ಮೋದಿಯವ್ರಿಗೆ ಬರೆದ ಪತ್ರದಲ್ಲಿ, “ಒಪ್ಪಂದವನ್ನ ಅನುಮೋದಿಸಲು ಟೆಂಡರ್ ಮೊತ್ತದ 30% ವರೆಗೆ ಮತ್ತು ಬಾಕಿ ಇರುವ ಮಸೂದೆಗಳ ವಿರುದ್ಧ ಕ್ರೆಡಿಟ್ ಪತ್ರವನ್ನ ಬಿಡುಗಡೆ ಮಾಡಲು 5%-6% ವರೆಗೆ ಒತ್ತಾಯಿಸುವ ಮಂತ್ರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಇತರರು ಗುತ್ತಿಗೆದಾರರಿಗೆ “ಕಿರುಕುಳ” ನೀಡುತ್ತಿದ್ದಾರೆ” ಎಂದು ತಿಳಿಸಲಾಗಿದೆ. ಈ ಎಲ್ಲದರ ಬಗ್ಗೆ ಈಗ ಸಿಎಂ ಬೊಮ್ಮಾಯಿ ತನಿಖೆಗೆ ಆದೇಶ ನೀಡಿದ್ದಾರೆ.
PublicNext
25/11/2021 09:03 pm