ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧಾನ ಪರಿಷತ್ ಚುನಾವಣೆ ಬಿಜೆಪಿ ಗೆದ್ದೇ ಗೆಲ್ಲುತ್ತದೆ : ಶ್ರೀರಾಮುಲು

ಕೊಪ್ಪಳ : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರ ಒಲವಿದೆ. ನಾಲ್ಕು ತಂಡ ಮಾಡಿಕೊಂಡು ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಒಟ್ಟು 24 ಕ್ಷೇತ್ರಗಳ ಪೈಕಿ 14ಕ್ಕೂ ಹೆಚ್ಚು ಕಡೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆ ಇದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಕೊಪ್ಪಳದ ಪಂಪಾ ಸರೋವರದಲ್ಲಿ ಮಾತನಾಡಿದ ಸಚಿವರು ಜನರ ಪ್ರತಿಕ್ರಿಯೆ ನೋಡಿ ಹತಾಶೆಯಿಂದ ಕಾಂಗ್ರೆಸ್ ನಾಯಕರು ಪ್ರಧಾನಿ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡುತಿದ್ದಾರೆ. ಅವರ ಮಾತು ಅವರ ಸಂಸ್ಕಾರ ತೋರಿಸಿಕೊಡುತ್ತದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಸ್ಪರ್ಧೆ ವಿಚಾರವಾಗಿ ಮಹಾಂತೇಶ ಕೌಜಲಗಿಮಠ ಬಿಜೆಪಿ ಬೆಳಗಾವಿ ಅಭ್ಯರ್ಥಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕುವಂತೆ ನಾವು ಮನವಿ ಮಾಡಿದ್ದೇವೆ. ಲಖನ್ ಜಾರಕಿಹೊಳಿ ಸ್ಪರ್ಧೆ ಅವರ ವೈಯಕ್ತಿಕ ವಿಚಾರ ಆ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ನಮಗೆ ಲಾಭ, ನಷ್ಟ ಅಂತಾನೂ ನಾವು ಮಾತನಾಡುವುದಿಲ್ಲ. ನಮ್ಮ ಪಾರ್ಟಿ ಮೇಲೆ ನಮಗೆ ಸ್ಪಷ್ಟತೆ ಇದೆ ಎಂದಿದ್ದಾರೆ.

ರಾಯಚೂರು- ಕೊಪ್ಪಳ ಅಭ್ಯರ್ಥಿ ಶರಣಗೌಡ ಪಾಟೀಲ್ ಅವಾಚ್ಚ ಪದ ಬಳಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಕೂಡ ಇದೇ ರಿತೀ ಮಾತಾಡುತ್ತಿದ್ದರು. ನಾನು ಅವರಿಗೂ ಹೇಳುತ್ತಾ ಬಂದಿದ್ದೇನೆ. ಇದು ನಿಮಗೆ ಶೋಭೆ ತರೋದಿಲ್ಲ ಅಂತಾ ಹೇಳಿದ್ದೇನೆ.ಅವರ ಸಂಸ್ಕಾರದಲ್ಲೇ ಕಾಂಗ್ರೆಸ್ ನ ಎಲ್ಲರೂ ಹೋಗ್ತಿದ್ದಾರೆ. ಅವನು ಶರಣಗೌಡ ಮಾತಾಡಿದ್ದು ರಾಜಕಾರಣಕಕ್ಕೆ ಕಳಂಕ ಸಣ್ಣ ಮನುಷ್ಯ ಆಕಾಶದಂತ ಮೋದಿಗೆ ಮಾತಾಡಿದ್ರೆ ಏನೂ ಆಗಲ್ಲ ಎಂದಿದ್ದಾರೆ.

Edited By : Shivu K
PublicNext

PublicNext

25/11/2021 10:37 am

Cinque Terre

35.97 K

Cinque Terre

1

ಸಂಬಂಧಿತ ಸುದ್ದಿ