ಜೈಪುರ್:ರಾಜ್ಯದ ರಸ್ತೆಗಳು ನುಣುಪಾಗಿ ನಟಿ ಕತ್ರಿನಾ ಕೈಫ್ ಕೆನ್ನೆ ತರವೇ ಇರಬೇಕು. ಹಾಗೇನೆ ನಿರ್ಮಿಸಬೇಕು ಎಂದು ನೂತನ ಸಚಿವ ರಾಜೇಂದ್ರ ಸಿಂಗ್ ಗುಧಾ ಹೇಳಿಕೆ ನೀಡಿ ಭಾರಿ ಸುದ್ದಿಯಾಗಿದ್ದಾರೆ.
ರಾಜಸ್ಥಾನದ ವಿಧಾನ ಸಭಾ ಕ್ಷೇತ್ರವಾದ ಉದಯಪುರವತಿಯಲ್ಲಿ ಜನರ ಜೊತೆಗೆ ಸಚಿವ ರಾಜೇಂದ್ರ ಸಿಂಗ್ ಸಂವಹನ ನಡೆಸಿದ್ದರು. ಆಗಲೇ ಇಲ್ಲಿಯ ಜನ ರಸ್ತೆಗಳು ಸರಿ ಇಲ್ಲವೇ ಇಲ್ಲ ಅಂತಲೇ ಅಳಲು ತೋಡಿಕೊಂಡರು.
ಆಗ ಇದೇ ಸಭೆಯಲ್ಲಿದ್ದ ಲೋಕೋಪಯೋಗಿ ಮುಖ್ಯ ಎಂಜಿನಿಯರ್ ಕಡೆಗೆ ತಿರುಗಿದ ಸಚಿವ ರಾಜೇಂದ್ರ ಸಿಂಗ್, ನಮ್ಮ ಈ ಕ್ಷೇತ್ರದ ರಸ್ತೆಗಳು ನಟಿ ಕತ್ರಿನಾ ಕೈಫ್ ಕೆನ್ನೆ ರೀತಿಯಲ್ಲಿಯೇ ನಿರ್ಮಾಣ ಆಗಬೇಕು ಅಂತಲೇ ತಮಾಷೆ ಮಾಡಿದ್ದಾರೆ. ಇದೇ ವೀಡಿಯೋನೆ ಈಗ ವೈರಲ್ ಆಗಿದೆ.
PublicNext
24/11/2021 10:37 pm