ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷದ ನಿರ್ಣಯ ಗೌರವಿಸುವೆ : ಆದರೆ ಟಿಕೆಟ್ ಕೈತಪ್ಪಿದ್ದೇಕೆ ಗೊತ್ತಾಗ್ತಾ ಇಲ್ಲ

ಬಾಗಲಕೋಟೆ: ಈ ಭಾಗದ ಹಿರಿಯ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಅವರಿಗೆ ಈ ಬಾರಿ ಎಂಎಲ್ಸಿ ಟಿಕೆಟ್ ನಿರಾಕರಿಸಲಾಗಿದೆ. ಆದರೆ ಅಸಮಾಧಾನದ ನಡುವೆಯೂ ಸಮಾಧಾನದ ಮಾತನಾಡಿದ್ದಾರೆ.

'' ಯಾವ ಕಾರಣಕ್ಕಾಗಿ ಪಕ್ಷ ನನಗೆ ಟಿಕೆಟ್ ನೀಡಲಿಲ್ಲ ಎನ್ನುವುದು ಗೊತ್ತಾಗಿಲ್ಲ. ಈ ಹಿಂದಿನಂತೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುವೆ'' ಎಂದು ಹೇಳಿ ತಮ್ಮ ಪಕ್ಷ ನಿಷ್ಠೆ ಮೆರೆದಿದ್ದಾರೆ.

ಟಿಕೆಟ್ ಕೈತಪ್ಪಿರುವ ಕುರಿತು ಮಂಗಳವಾರ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ ಅವರು, ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಪಕ್ಷ ಕೈಗೊಂಡಿರುವ ನಿರ್ಣಯವನ್ನು ಗೌರವಿಸುತ್ತೇನೆ. ಕಳೆದ 45 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧನಾಗಿ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವೆ. ಸತತ ನಾಲ್ಕು ಬಾರಿ ಅವಿಭಜಿತ ವಿಜಯಪುರ ಜಿಲ್ಲೆಯ ಜನಪ್ರತಿತಿಧಿಯಾಗಿ ಕೆಲಸ ಮಾಡಿರುವೆ. ಇದೀಗ ಪಕ್ಷದ ಟಿಕೆಟ್ ಕೈತಪ್ಪಿರುವುದಕ್ಕೆ ಬೇಸರವಿಲ್ಲ. ರಾಜಕಾರಣದಲ್ಲಿ ಏಳು ಬೀಳುಗಳು ಸಾಮಾನ್ಯ ಎಂದಿದ್ದಾರೆ.

ಹಾಲಕೆರೆ ಅಭಿನವ ಸಂಗನಬಸವ ಶ್ರೀಗಳ ಅಂತಿಮ ದರ್ಶನಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

ವರದಿ : ವಿಠ್ಠಲ ಬಲಕುಂದಿ, ಬಾಗಲಕೋಟ

Edited By :
PublicNext

PublicNext

23/11/2021 12:27 pm

Cinque Terre

20.11 K

Cinque Terre

1

ಸಂಬಂಧಿತ ಸುದ್ದಿ