ತುಮಕೂರು:ಕಾಂಗ್ರೆಸ್ ಪಕ್ಷ ಮಾಡಿರೋ ಆಸ್ತಿ-ಪಾಸ್ತಿಯನ್ನ ಬಿಜೆಪಿ ಸರ್ಕಾರ ಮಾರಾಟ ಮಾಡಿದೆ. ರೈಲು-ವಿಮಾನ ಎಲ್ಲವೂ ಮಾರಾಟ ಆಗಿವೆ ಎಂದು ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಜಾಗೃತಿ ಅಭಿಯಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾರಿ,ಸಾರಿ ಹೇಳಿದ್ದಾರೆ.
ಬಿಜೆಪಿ ಅತಿ ದೊಡ್ಡ ಭ್ರಷ್ಟ ಸರ್ಕಾರ.ಕಾಂಗ್ರೆಸ್ ಸರ್ಕಾರ ಖಾಸಗೀಕರಣವನ್ನ ವಿರೋಧಿಸಿತ್ತು.ಆದರೆ ಬಿಜೆಪಿ ಸರ್ಕಾರ ಎಲ್ಲವೂ ಮಾರಿಬಿಟ್ಟಿದೆ. ರೈಲು-ವಿಮಾನ ಎಲ್ಲವೂ ಮಾರಾಟ ಆಗಿದೆ.ಬ್ಯಾಂಕುಗಳನ್ನ ರಾಷ್ಟ್ರೀಕರಣ ಮಾಡಿದೆ ಎಂದು ದೂರಿದ್ದಾರೆ ಡಿಕೆ ಶಿವಕುಮಾರ್.
ರಾಹುಲ್ ಗಾಂಧಿ ಹೇಳಿದಂತೆ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಯನ್ನ ವಾಪಸ್ ಪಡೆದಿದೆ. ಆದರೆ ಕೃಷಿ ಕಾಯ್ದೆ ವಿರೋಧದ ಹೋರಾಟದಲ್ಲಿ ಅನೇಕ ರೈತರು ಪ್ರಾಣತ್ಯಾಗ ಮಾಡಿದ್ದಾರೆ.ಅವರನ್ನ ಸರ್ಕಾರ ಹುತಾತ್ಮರು ಎಂದು ಘೋಷಣೆ ಮಾಡಲೇಬೇಕು.ಆಯಾ ಕುಟುಂಬಕ್ಕೆ 500 ಎಕರೆ ಜಮೀನು ಕೊಡಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ
PublicNext
21/11/2021 07:25 pm