ಬೆಳಗಾವಿ:ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯ ಜನ ಸ್ವರಾಜ್ ಯಾತ್ರೆಯನ್ನ ಟ್ವಿಟರ್ ಮೂಲಕ ಟೀಕಿಸಿದ್ದಾರೆ. ಇದು ಜನ ಸ್ವರಾಜ್ ಯಾತ್ರೆ ಅಲ್ಲ. ಜನಬರ್ಬಾದ್ ಯಾತ್ರೆ ಚುಚ್ಚಿದ್ದಾರೆ. ಇದಕ್ಕೆ ಬೆಳಗಾವಿಯಲ್ಲಿ ತಿರುಗೇಟು ನೀಡಿರೋ ಬಿಎಸ್ ಯಡಿಯೂರಪ್ಪ ಸಿದ್ದರಾಮಯ್ಯ ಹತೋಟಿ ತಪ್ಪಿ ಮಾತನಾಡುತ್ತಿದ್ದಾರೆ. ಇವರ ಯೋಗ್ಯತೆಗೆ ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ಆಗ್ತಿಲ್ಲ ಅಂತ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯದಿಂದ ಅಭ್ಯರ್ಥಿಗಳ ಆಯ್ಕೆ ಮಾಡಲು ಆಗುತ್ತಿಲ್ಲ.ಆದರೆ ಏನೂ ಆಗುತ್ತಿಲ್ಲ ಅನ್ನೋ ಕಾರಣಕ್ಕೇನೆ ಸಿದ್ದರಾಮಯ್ಯ ಹತೋಟಿ ತಪ್ಪಿ ಮಾತನಾಡುತ್ತಿದ್ದಾರೆ. ಜನ ಬೆಂಬಲ ಇಲ್ಲ ಅಂತಲೂ ಗೊತ್ತಾಗಿದೆ. ಅದಕ್ಕೇನೆ ಏನೇನೋ ಮಾತನಾಡುತ್ತಿದ್ದಾರೆ. ಎಲೆಕ್ಷನ್ ಬರಲಿ ಎಲ್ಲ ತಿಳಿಯುತ್ತದೆ ಅಂತಲೇ ಬಿಎಸ್ ಯಡಿಯೂರಪ್ಪ ತಿವಿದಿದ್ದಾರೆ.
PublicNext
21/11/2021 06:47 pm