ಮಂಗಳೂರು: ಮಂಗಳೂರಿನಲ್ಲಿ ಎಸ್ ಡಿಪಿಐ ಮುಖಂಡ, ಕಾಂಗ್ರೆಸ್ ಗೆ ಬಹಿರಂಗ ಬೆದರಿಕೆ ಹಾಕಿದ ಘಟನೆ ನಡೆದಿದೆ."ನಿಮ್ಮ ದಬ್ಬಾಳಿಕೆ, ದೌರ್ಜನ್ಯಕ್ಕೆ ನಾವು ಬಗ್ಗುವವರಲ್ಲ. ನಿಮ್ಮನ್ನು ಆಸ್ಪತ್ರೆಗೆ ಕಳುಹಿಸೋಕು ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸೋಕೂ ಗೊತ್ತಿದೆ" ಎಂದು ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಕಾಂಗ್ರೆಸ್ಸಿಗರಿಗೆ ಬಹಿರಂಗ ಬೆದರಿಕೆ ಒಡ್ಡಿದ್ದಾರೆ.
ಕಾಂಗ್ರೆಸ್ ನವರು ನಿರಾಶ ಭಾವನೆಗೆ ಹೋಗಿರೋದನ್ನ ಗಮನಿಸ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಮಂಗಳೂರು ಕ್ಷೇತ್ರದಲ್ಲಿ ನಮ್ಮ ಎಸ್ಡಿಪಿಐ ಪ್ರತಿನಿಧಿಗಳು ಬೆಳೆಯುತ್ತಿದ್ದಾರೆ. ಇದನ್ನ ಕಂಡು ಅವರಿಗೆ ಸಹಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಯಾರೋ ಕಂಜಿಪಿಂಜಿ ಗಾಂಜಾದವರನ್ನ ಬಿಟ್ಟು, ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಇಷ್ಟರವರೆಗೆ ನಾವು ತಲೆ ತಗ್ಗಿಸಿದ್ದೇವೆ. ಆದರೆ, ನಮಗೆ ಎರಡು M ಇದೆ. ಇದರಲ್ಲಿ ಒಂದು ಮ್ಯಾನ್ ಪವರ್, ಇನ್ನೊಂದು ಮಸ್ ಲ್ ಪವರ್. ಇನ್ನೆಲ್ಲಿಯಾದರೂ ನಮ್ಮ ಪಕ್ಷದ ಕಾರ್ಯಕರ್ತರನ್ನ ಮುಟ್ಟಿದರೆ ಒಂದು M ಯೂಸ್ ಮಾಡ್ತೇವೆ. ಎಸ್ ಡಿಪಿಐಗೆ ಸೇರೋದಾದ್ರೆ ಆಸ್ಪತ್ರೆಯಲ್ಲಿ ಮಲಗೋಕೆ, ಜೈಲಿಗೆ ಹೋಗೋಕೆ, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು. ನಿಮ್ಮನ್ನೂ ಆಸ್ಪತ್ರೆಗೆ ಕಳುಹಿಸೋಕು ಗೊತ್ತಿದೆ, ಖಬರಿಸ್ತಾನಕ್ಕೂ ಕಳುಹಿಸೋಕೂ ಗೊತ್ತಿದೆ" ಎಂದು ಆಕ್ರಮಣಕಾರಿ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
PublicNext
21/11/2021 05:20 pm