ಹಾಸನ: ಕನ್ನಡ ಅನ್ನೋದು ದೂರ ಇದ್ದಾಗಲೇ ಅದರ ಪರಿಮಳ ಮತ್ತು ಅದರ ಮೇಲಿನ ಅಭಿಮಾನ ಹೆಚ್ಚೋದು.ಅದಕ್ಕೆ ಸಾಕ್ಷಿ ಅನ್ನೋ ಥರವೇ ದುಬೈನಿಂದಲೇ ಮಹಿಳೆಯೊಬ್ಬರು, ಕನ್ನಡದ ಮೇಲಿನ ಅಪಾರ ಅಭಿಮಾನದಿಂದಲೇ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ಬಂದಿದ್ದಾರೆ.
ಮೋನಿಕಾ ದೀಪಕ್ ಹೆಸರಿನ ಕನ್ನಡಾಭಿಮಾನಿ ಮಹಿಳೆ ಸದ್ಯ ಇರೋದು ದುಬೈನಲ್ಲಿಯೇ.ಅಲ್ಲಿಂದಲೇ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮತ ಹಾಕಲು ಇಲ್ಲಿಗೆ ಬಂದಿದ್ದಾರೆ. ಹಾಸನದ ಬೇಲೂರು ತಾಲೂಕು ಕಚೇರಿಯಲ್ಲಿ ಮತ ಹಾಕಿದ್ದಾರೆ. ಒಂದೂವರೆ ವರ್ಷದ ಮಗುವಿನೊಂದಿಗೆ ಇಲ್ಲಿಗೆ ಬಂದಿದ್ದ ಮೋನಿಕಾ ದೀಪಕ್, ಕಸಾಪ ಮತ ಹೊಂದಿರೋ ಪ್ರತಿಯೊಬ್ಬರು ಮತ ಚಲಾಯಿಸಿ ಅಂತಲೇ ಹೇಳಿದ್ದಾರೆ.
PublicNext
21/11/2021 05:12 pm