ಉಡುಪಿ: ಕೇಂದ್ರ ಕೃಷಿ ಕಾಯ್ದೆ ವಾಪಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಆರೆಸ್ಸೆಸ್ ಧುರೀಣ ಕಲ್ಲಡ್ಕ ಪ್ರಭಾಕರ್ ಭಟ್,"ಕಾಯ್ದೆಯನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಗೊಂದಲ ನಿರ್ಮಾಣವಾಗಿತ್ತು.
ಒಂದು ಒಳ್ಳೆಯ ಮಸೂದೆ ವಾಪಸ್ ಪಡೆಯಲಾಗಿದೆ.ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಮತ್ತೆ ಮಂಡನೆ ಮಾಡಿಯೇ ಮಾಡುತ್ತಾರೆ. ಮೋದಿ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ ಎಂದರೆ, ಎರಡು ಹೆಜ್ಜೆ ಮುಂದಕ್ಕೆ ಇಡುತ್ತಾರೆ ಎಂದರ್ಥ" ಎಂದರು.
ಕೂತು ಚರ್ಚಿಸಲು ಹೋರಾಟಗಾರರು ತಯಾರಿರಲಿಲ್ಲ.ಕೇಂದ್ರ ಸರಕಾರ ಮತ್ತೆ ರೈತರ ಜೊತೆ ಚರ್ಚಿಸಲಿದೆ. ಸರಕಾರದ ಜೊತೆ ಚರ್ಚಿಸದೆ ವಿರೋಧಿಸುವುದು ಪ್ರಜಾಪ್ರಭುತ್ವವೇ ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲೂ ಸರಕಾರದ ಜೊತೆ ವಿಪಕ್ಷಗಳು ಚರ್ಚಿಸಲು ಸಿದ್ಧವಿರಲಿಲ್ಲ ಎಂದ ಭಟ್ , ವಿರೋಧಿಗಳು ರಾಜಕೀಯ ಲಾಭ ಪಡೆಯುವ ದುರುದ್ದೇಶ ಹೊಂದಿದ್ದಾರೆ.
ರಾಜಕೀಯ ಲಾಭದ ಉದ್ದೇಶದಿಂದ ಕೇಂದ್ರ ಸರಕಾರ ಕಾಯಿದೆ ವಾಪಸು ಪಡೆದಿಲ್ಲ. ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ವಾಪಸು ಪಡೆಯಲಾಗಿದೆ. ಒಂದು ವರ್ಷ ಕಾಲ ಕೇಂದ್ರ ಸರಕಾರ ರೈತರ ಮನವೊಲಿಸಲು ಪ್ರಯತ್ನಿಸಿದೆ ಎಂದು ಪ್ರಭಾಕರ ಭಟ್ ಸಮರ್ಥನೆ ನೀಡಿದರು.
PublicNext
21/11/2021 03:10 pm