ಜೈಪುರ: ಬಹು ನಿರೀಕ್ಷಿತ ರಾಜಸ್ಥಾನ ಕ್ಯಾಬಿನೆಟ್ ಪುನಾರಚನೆಗೆ ಒಂದು ದಿನ ಮೊದಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಮಸ್ತ ಸಚಿವರ ರಾಜೀನಾಮೆ ಪಡೆದಿದ್ದಾರೆ. ಶನಿವಾರ ಸಂಜೆ ಸಿಎಂ ಅಶೋಕ್ ಗೆಹ್ಲೋಟ್ ಅವರ ಮನೆಯಲ್ಲಿ ನಡೆದ ಸಭೆಯ ನಂತರ ಎಲ್ಲಾ ಸಚಿವರು ಪಕ್ಷದ ಹೈಕಮಾಂಡ್ ಗೆ ರಾಜೀನಾಮೆ ಸಲ್ಲಿಸಿದರು. ಸಚಿವ ಸಂಪುಟ ಸಭೆಯ ಬಳಿಕ ರಾಜ್ಯ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಈ ಕುರಿತು ಮಾಹಿತಿ ನೀಡಿದರು.
ಭಾನುವಾರ ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್ ಶಾಸಕರನ್ನು ಪಕ್ಷದ ರಾಜ್ಯ ಕಚೇರಿಗೆ ಕರೆಸಲಾಗುತ್ತದೆ. ಆ ನಂತರ ಕಾರ್ಯಕ್ರಮವನ್ನು ಗೆಹ್ಲೋಟ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಅಜಯ್ ಮಾಕೆನ್ ನಿರ್ಧರಿಸುತ್ತಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಉದ್ದೇಶಿಸಿ ರಾಜೀನಾಮೆಯನ್ನು ತಿಳಿಸಲಾಗುವುದು, ನಂತರ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ ನಡೆಯುತ್ತದೆ ಎಂದು ಅವರು ಹೇಳಿದರು.
ಪ್ರಸ್ತುತ ರಾಜ್ಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 21 ಮಂದಿ ಇದ್ದಾರೆ. ರಾಜ್ಯದಲ್ಲಿ ಶಾಸಕರ ಸಂಖ್ಯೆ 200 ಆಗಿದ್ದು, ಅದರ ಪ್ರಕಾರ ಸಂಪುಟದಲ್ಲಿ ಗರಿಷ್ಠ 30 ಮಂದಿ ಸದಸ್ಯರಾಗಬಹುದು.
PublicNext
20/11/2021 10:58 pm