ನವದೆಹಲಿ : ದೇಶದಲ್ಲಿ ಜಾರಿಯಾದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ರೈತರು ಆರಂಭಿಸಿದ ಹೋರಾಟಕ್ಕೆ ಕಡೆಗೂ ಜಯ ಸಂದಿದೆ.
ಸದ್ಯ ವಿವಾದಾತ್ಮಕ 3 ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬೆನ್ನಲ್ಲೆ ಬಿಜೆಪಿ ಸಂಸದ ವರುಣ್ ಗಾಂಧಿ ಪತ್ರವೊಂದನ್ನು ಬರೆದಿದ್ದಾರೆ. ರೈತ ಬಂಧುಗಳು ಧರಣಿ ಮುಗಿಸಿ ಗೌರವಯುತವಾಗಿ ಮನೆಗೆ ಮರಳುವಂತೆ ಎಂಎಸ್ ಪಿ ಮತ್ತಿತರ ವಿಷಯಗಳ ಕುರಿತು ಕಾನೂನು ರೂಪಿಸುವ ಬೇಡಿಕೆಯನ್ನು ಕೂಡ ತಕ್ಷಣವೇ ತೀರ್ಮಾನಿಸಬೇಕೆಂಬುದು ನನ್ನ ವಿನಮ್ರ ವಿನಂತಿ.
ಈ ಪತ್ರದಲ್ಲಿ ಲಖಿಂಪುರ ಖೇರಿ ಘಟನೆ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂದು ಬರೆದಿದ್ದಾರೆ. ಈ ಸಂಬಂಧ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದೇ ವೇಳೆ ರಾಷ್ಟ್ರದ ಹಿತದೃಷ್ಟಿಯಿಂದ ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಖಾತರಿ ನೀಡಬೇಕೆಂಬ ರೈತರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಈ ಚಳವಳಿಯಲ್ಲಿ 700 ರೈತರು ಹುತಾತ್ಮರಾಗಿದ್ದು, ಅವರ ಕುಟುಂಬಕ್ಕೂ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
PublicNext
20/11/2021 07:30 pm