ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಕಿ ಯನ್ನು ಸರಿಯಾಗಿ ಬಳಸಿಕೊಂಡಿದ್ದೇ ಕಾಂಗ್ರೆಸ್ : ಆರಗ

ರಾಯಚೂರು: ಇತ್ತೀಚಿನ ರಾಜಕಾರಣಿಗಳು ದೇಶದ ಪ್ರಗತಿ ಬಗ್ಗೆ ಚಿಂತಿಸುವ ಬದಲು ಪರಸ್ಪರ ಕೆಸರೆರಚಾಟದಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಹುಚ್ಚು ಹಿಡಿದ ರಾಜಕೀಯ ನಾಯಕರುಗಳಿಗೆ ಇಡೀ ಪ್ರಪಂಚವೇ ಹುಚ್ಚು ಹಿಡಿದಂತೆ ಕಾಣಿಸುತ್ತದೆ. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ನಮ್ಮ ಬಗ್ಗೆ ಅಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.

ಸಿರವಾರ ಪಟ್ಟಣದಲ್ಲಿ ನಡೆದ ಜನ ಸ್ವರಾಜ್ ಯಾತ್ರೆಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಕೊತ್ವಾಲ್ ರಾಮಚಂದ್ರ ಅಂಥವರನ್ನು ಬಳಸಿಕೊಂಡು ಮೇಲೆ ಬಂದವರು. ಆದರೆ, ನಾವು ಜನರಿಂದ ಬೆಳೆದು ಬಂದಿದ್ದೇವೆ. ಜಲಿಯನ್ ವಾಲಾಬಾಗ್ ಎಂದು ಶುದ್ಧವಾಗಿ ಮಾತನಾಡಲು ತೊದಲುವ ಅವರು ಏನು ಮಾತನಾಡುತ್ತಾರೋ ತಿಳಿಯುವುದಿಲ್ಲ. ತಾಕತ್ತಿದ್ದರೆ ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ನವರು ಒಂದೇ ಒಂದು ದೂರು ಕೊಡಿಸಲಿ.

ಆರೋಪಿ ಶ್ರೀಕಿ ವಿರುದ್ಧ ಕೆಫೆ ಗಲಾಟೆ ಪ್ರಕರಣದಲ್ಲಿ 2018ರಲ್ಲಿ ಚಾರ್ಚ್ ಶೀಟ್ ಸಲ್ಲಿಸಿದಾಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏಕೆ ಬಂಧಿಸಲಿಲ್ಲ. ಆಗ ಏಕೆ ವಿಚಾರಣೆ ಮಾಡಲಿಲ್ಲ. ಈಗ ಬಹಳ ಜೋರಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರೇ ಆಗ ಐಟಿ ಬಿಟಿ ಸಚಿವರಾಗಿದ್ದರು. ಶ್ರೀಕಿಯನ್ನು ಯಾರು,ಯಾರು ಬಳಸಿ ಕೊಂಡಿದ್ದಾರೆ ಎಂಬುದನ್ನು ತಿಳಿಸಲಿ ಎಂದರು.

ಶ್ರೀಕಿಯಂಥರನ್ನು ಬಳಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ನನ್ನ ಬಳಿ ದೂರಿದ್ದಾರೆ. ಶ್ರೀಕಿ ಮೂಲಕ ತಮ್ಮ ಕೆಲಸ ಮಾಡಿಕೊಂಡಿದ್ದಾರೆ ಎಂದರು.

Edited By : Nirmala Aralikatti
PublicNext

PublicNext

20/11/2021 04:30 pm

Cinque Terre

32.87 K

Cinque Terre

4

ಸಂಬಂಧಿತ ಸುದ್ದಿ