ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿಗೆ ಪತ್ರ ಬರೆದು ನ್ಯಾಯ ಕೇಳ್ತಿದ್ದಾರೆ ಪ್ರಿಯಾಂಕಾ ಗಾಂಧಿ

ನವದೆಹಲಿ: ಪ್ರಿಯಾಂಕಾ ಗಾಂಧಿ ವಾದ್ರಾ ನ್ಯಾಯ ಕೇಳುತ್ತಿದ್ದಾರೆ. ನ್ಯಾಯ ಕೊಡಿ ಅಂತ ಈಗ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದಿದ್ದಾರೆ. ಯಾವ ಕಾರಣಕ್ಕೆ ಅಂತಿರೋ ಈ ಸ್ಟೋರಿ ನೋಡಿ.

ಪ್ರಿಯಾಂಕಾ ಗಾಂಧಿ ಲಿಖಿಂಪುರ ಘಟನೆಯನ್ನ ಇನ್ನೂ ಬಿಡ್ತಿಲ್ಲ. ಅದನ್ನ ಅಸ್ತ್ರವಾಗಿಯೇ ಇಟ್ಟುಕೊಂಡಿರೊ ಪ್ರಿಯಾಂಕಾ ಗಾಂಧಿ, ಲಿಖಿಂಪುರ ಹಿಂಸಾಚಾರದಲ್ಲಿ ರೈತರು ಮೃತಪಟ್ಟಿದ್ದಾರೆ. ಅವರಿಗೆ ನೀವು ನ್ಯಾಯಕೊಡಿಸಬೇಕು ಅಂತಲೇ ಪತ್ರದಲ್ಲಿ ಬರೆದಿದ್ದಾರೆ.

ನಿಜವಾಗಲೂ ನಿಮಗೆ ರೈತರ ಮೇಲೆ ಕಾಳಜಿ ಇದ್ದರೇ, ಲಕ್ನೋದಲ್ಲಿ ನಡೆಯುತ್ತಿರೋ ಡಿಜಿಪಿ ಮತ್ತು ಐಜಿಪಿ ಸಮ್ಮೇಳದಲ್ಲಿ ಭಾಗವಹಿಸಲೇ ಬಾರದು. ಲಿಖಿಂಪುರ ಪ್ರಕರಣದ ಆರೋಪಿ ತಂದೆ ಅಜಯ್ ಮಿಶ್ರಾ ಅವರೊಟ್ಟಿಗೆ ವೇದಿಕೆ ಹಂಚಿಕೊಳ್ಳಲೇಬಾರದು. ಗೃಹ ಖಾತೆ ರಾಜ್ಯ ಸಚಿವರಾಗಿ ಅಜಯ್ ಮಿಶ್ರಾ ಮುಂದುವರೆದರೆ ನಿಜವಾಗಲೂ ರೈತರ ಕುಟುಂಬಕ್ಕೆ ನ್ಯಾಯ ಸಿಗೋದಿಲ್ಲ ಅಂತ ಇದೇ ಪತ್ರದಲ್ಲಿಯೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Edited By :
PublicNext

PublicNext

20/11/2021 02:34 pm

Cinque Terre

27.01 K

Cinque Terre

4

ಸಂಬಂಧಿತ ಸುದ್ದಿ