ಮೈಸೂರು: ನನ್ನನ್ನು ಸೋಲಿಸಿ ಇಲ್ಲಿಗೆ ಬಂದಿದ್ದೀರಲ್ಲಾ..ನಾಚಿಕೆ ಆಗೋಲ್ವಾ ನಿಮಗೆ? ಹೀಗಂತ ಹೇಳಿದ್ದು ಮಾಜಿ ಸಿಎಂ ಸಿದ್ದರಾಮಯ್ಯ.
ಇತ್ತೀಚೆಗೆ ಸಿದ್ದರಾಮಯ್ಯರಿಗೆ ಸೋಲಿನ ಭೀತಿ ಕಾಡುತ್ತಿರುವ ಲಕ್ಷಣ ಕಾಣುತ್ತಿವೆ. ಶುಕ್ರವಾರ ಮೈಸೂರಿನ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಕಾರ್ಯಕರ್ತರು ಮರಿಗೌಡಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಸಿದ್ದರಾಮಯ್ಯ ಕಾರನ್ನು ಅಡ್ಡಗಟ್ಟಿ ಘೋಷಣೆ ಕೂಗಿದರು. ಈ ಸಂದರ್ಭ ಕೋಪಗೊಂಡ ಸಿದ್ದಾರಾಮಯ್ಯ ಮಾಸ್ಕ್ ತೆಗೆದು, "ಎಲ್ಲಾ ನನ್ನ ಸೋಲಿಸಿ ಬಿಟ್ಟು ಇಲ್ಲಿ ಬಂದಿದ್ದೀರಿ. ನಾಚಿಕೆ ಆಗೋದಿಲ್ವಾ ನಿಮಗೆ?" ಎಂದು ಸಿಡಿಮಿಡಿಗೊಂಡಿದ್ದಾರೆ.
PublicNext
20/11/2021 11:48 am