ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಆಡಳಿತಾರೂಢ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ ವಿಧಾನಸಭೆ ಅಧಿವೇಶನದಲ್ಲಿ ನಮ್ಮ ಪಕ್ಷದ ಶಾಸಕರನ್ನು ಅವಮಾನಿಸುತ್ತಿದೆ. ವೈಯಕ್ತಿಕವಾಗಿ ನಿಂದಿಸುತ್ತಿದೆ. ಹೀಗಾಗಿ ನಾನು ಸಿಎಂ ಅಗುವವರೆಗೂ ವಿಧಾನಸಭೆ ಅಧಿವೇಶನಕ್ಕೆ ಹೋಗೋದಿಲ್ಲ ಎಂದು ಚಂದ್ರಬಾಬು ನಾಯ್ಡು ಕಣ್ಣೀರಿಟ್ಟಿದ್ದಾರೆ.
ಅಮರಾವತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಆಂಧ್ರ ವಿಧಾನಸಭೆ ಅಧಿವೇಶನದಲ್ಲಿ ನಡೆದ ನಿಂದನೆಯ ಪ್ರಸಂಗಗಳನ್ನು ನೆನೆದು ಮಕ್ಕಳಂತೆ ಕಣ್ಣೀರಿಟ್ಟಿದ್ದಾರೆ. ನಾನು ಕಳೆದ ಹಲವು ದಶಕಗಳಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಹಲವು ನಾಯಕರ ಜತೆ ಕೆಲಸ ಮಾಡಿದ್ದೇನೆ. ಆಗಲೂ ಕೆಲವು ಅವಮಾನಕರ ಸಂದರ್ಭಗಳನ್ನು ಎದುರಿಸಿದ್ದೇನೆ. ಆದರೆ ಈ ಬಾರಿಯ ಅಧಿವೇಶನದಲ್ಲಿ ಸಿಎಂ ಜಗನ್ ಮೋಹನ್ ಅವರು ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಭಾರವಾದ ಧ್ವನಿಯಲ್ಲಿ ಹೇಳಿದ ಚಂದ್ರ ಬಾಬು ಕಣ್ಣೀರಿಟ್ಟಿದ್ದಾರೆ.
PublicNext
19/11/2021 06:09 pm