ತುಮಕೂರು:ಕಾಂಗ್ರೆಸ್ ಪಕ್ಷದ ಸ್ಥಿತಿ ಬೇರೆ ರಾಜ್ಯದಲ್ಲಿ ದೂರ್ಬಿನ್ ಹಾಕಿ ಹುಡುಕೋ ರೀತಿಯಲ್ಲಿಯೇ ಇದೆ. ಪಂಜಾಬ್ ನಲ್ಲಂತೂ ಕಾಂಗ್ರೆಸ್ ವಾಶ್ ಔಟ್ ಆಗಿದೆ.ಹೀಗಿರೋವಾಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಜಗಳದಿಂದ ರಾಜ್ಯದಲ್ಲೂ ಕಾಂಗ್ರೆಸ್ ವಾಶ್ ಜೌಟ್ ಆಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಜನ ಸ್ವರಾಜ್ ಯಾತ್ರೆ ಒಂದು ತಂಡದ ನೇತೃತ್ವಹಿಸಿರೋ ಜಗದೀಶ್ ಶೆಟ್ಟರ್ ಅವ್ರು ಇಂದು ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ, ಯಡಿಯೂರಪ್ಪ ನೇತೃತ್ವದಲ್ಲಿ ಒಂದು ತಂಡ ಹಾಗೂ ಈಶ್ವರಪ್ಪ ಅವರ ನೇತೃತ್ವದಲ್ಲಿ ಒಂದು ತಂಡ ಜನ ಸ್ವರಾಜ್ ಯಾತ್ರೆ ಮಾಡಲಾಗುತ್ತಿದೆ.ಈ ಮೂಲಕ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳನ್ನು ಒಂದೇಡೆ ಸೇರಿಸುವುದು. ಅವರಿಗೆ ಶಕ್ತಿ ತುಂಬುವುದು ಕೆಲಸ ಮಾಡಲಾಗುತ್ತದೆ ಎಂದಿದ್ದಾರೆ.
ವಿಧಾನ ಪರಿಷತ್ 25 ಕ್ಷೇತ್ರಗಳಲ್ಲಿ 15 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲುವು ಸಾಧಿಸಿಸುತ್ತೇವೆ. ತುಮಕೂರು ಕ್ಷೇತ್ರದಲ್ಲೂ ಕೂಡ ಬಿಜೆಪಿ ಗೆಲುವು ಸಾಧಿಸಲಿದೆ.ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ ಎಂದು ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಮಾತು ಮುಂದುವರೆಸಿದ ಶೆಟ್ಟರ್ ಅವ್ರು ಕಾಂಗ್ರೆಸ್ ಪಕ್ಷ ಬೇರೆ ರಾಜ್ಯದಲ್ಲಿ ವಾಶ್ ಔಟ್ ಆಗಿದೆ.ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಕಿತ್ತಾಟದಿಂದ ರಾಜ್ಯದಲ್ಲೂ ಕಾಂಗ್ರೆಸ್ ಕಳೆದೆ ಹೋಗುತ್ತದೆ. ಈ ಹಿನ್ನೆಲೆಯಲ್ಲಿಯೇ ನಾವು ಈಗ ಜನ ಸ್ವರಾಜ್ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ ಜಗದೀಶ್ ಶೆಟ್ಟರ್.
PublicNext
19/11/2021 04:22 pm