ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆ ಆಗಿದೆ.ಇದರಿಂದ ಎಲ್ಲಡೆ ಬೆಳೆ ಹಾನಿ ಆಗಿದೆ.ಹಳೆ ಮೈಸೂರು ಭಾಗದಲ್ಲಿ ರಾಗಿಗೆ ಹಾನಿಯಾಗಿದೆ. ಹಾಸನ, ಮೈಸೂರು, ಮಂಡ್ಯದಲ್ಲಿ ಕೂಡ ರಾಗಿಗೆ ಹೆಚ್ಚು ಹಾನಿಯಾಗಿದೆ.ಬೆಳಗಾವಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಹಾನಿ ಆಗಿದೆ. ಈಗಾಗಲೇ ಪರಿಹಾರ ನಿಗದಿ ಆಗಿದೆ. ಹೆಚ್ಚು ಕಡಿಮೆ ಅಂದಾಜು 130 ಕೋಟಿಯೆಷ್ಟು ಪರಿಹಾರ ಕೊಡಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಭಾರಿ ಮಳೆಗೆ ಎಲ್ಲೆಡೆ ಹಾನಿಯಾಗಿದ್ದು ಪರಿಹಾರ ಎಷ್ಟು ಕೊಡಬೇಕೆನ್ನುವುದು ನಿಗದಿ ಆಗಿದೆ. ಈಗಾಗಲೇ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಹಾನಿಯಾಗಿದೆ ಅನ್ನೋದನ್ನ ಗುರುತಿಸಿದ್ದೇನೆ. ಅಧಿಕಾರಿಗಳನ್ನೂ ಕೂಡ ಆಯಾ ಜಾಗಕ್ಕೆ ಕಳಿಸಿಕೊಡಲಾಗಿದೆ. ಹಾನಿಯ ಲೆಕ್ಕದಂತೆ ಒಟ್ಟು 130 ಕೋಟಿ ಪರಿಹಾರ ಕೊಡಬೇಕಾಗುತ್ತದೆ.ರೈತರ ಅಕೌಂಟ್‌ಗೇನೆ ಪರಿಹಾರದ ದುಡ್ಡು ಹೋಗುತ್ತದೆ. ಕಾಫಿ ಬೆಳಗಾರರ ಹಾನಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
PublicNext
19/11/2021 03:53 pm