ಉಡುಪಿ: ಕೇಂದ್ರ ಕೃಷಿ ಕಾಯ್ದೆ ವಾಪಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಇಂಧನ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್,ಚುನಾವಣೆಯನ್ನು ಗಮನದಲ್ಲಿಟ್ಟು ಈ ನಿರ್ಣಯ ತೆಗೆದುಕೊಂಡಿಲ್ಲ.ಈಗ ವಾಪಾಸ್ ಪಡೆದಿರುವುದು ರೈತಪರವಾದಂತಹ ಬಿಲ್ ಗಳು.ರೈತಪರ ಹತ್ತಾರು ಯೋಜನೆಗಳನ್ನು ಮೋದಿ ಸರ್ಕಾರ ಕೊಟ್ಟಿದೆ. ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಕೊರತೆಯಾಗಿದೆ ಎಂದು ಸ್ವತಃ ಮೋದಿ ಹೇಳಿದ್ದಾರೆ. ರೈತರ ವಿಶ್ವಾಸಗಳಿಸುವುದರಲ್ಲಿ ಕೊರತೆ ಉಂಟಾಗಿದೆ ಎಂದು ಹೇಳಿದ್ದಾರೆ.
ರೈತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮುಂದೆ ಏನು ಮಾಡಬೇಕು ಎಂದು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂದ ಅವರು,ರೈತರ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ.ದಲ್ಲಾಳಿಗಳ ಪರ ಯಾರಿದ್ದಾರೆ ಎಂದು ಹತ್ತಾರು ಹೋರಾಟದಲ್ಲಿ ಗೊತ್ತಾಗಿದೆ.ರೈತರ ಹತ್ತಿರ ಹೋಗುವ ಇನ್ನಷ್ಟು ಪ್ರಯತ್ನಗಳನ್ನು ನಾವು ಮಾಡುತ್ತೇವೆ.ಬಿಲ್ಲಿನಿಂದ ತೊಂದರೆಯಾಗುತ್ತೋ ಬಿಲ್ ಇಲ್ಲದೆ ತೊಂದರೆ ಆಗುತ್ತೋ ಎಂಬುದನ್ನು ಅಭಿಯಾನದ ಮೂಲಕ ತೆಗೆದುಕೊಂಡು ಹೋಗುತ್ತೇವೆ.ಜನರ ಅಭಿಪ್ರಾಯವನ್ನು ತೆಗೆದುಕೊಂಡು ಕಾಲಕಾಲಕ್ಕೆ ನಿರ್ಣಯಗಳನ್ನು ಬದಲು ಮಾಡಿದ್ದೇವೆ ಎಂದು ಹೇಳಿದ್ದಾರೆ.
PublicNext
19/11/2021 03:34 pm