ಮಂಗಳೂರು: ಕೇಂದ್ರ ಸರ್ಕಾರದಿಂದ ರೈತ ತಿದ್ದುಪಡಿ ಕಾಯಿದೆಯನ್ನು ರಾಹುಲ್ ಗಾಂಧಿ ಈ ಮೊದಲೇ ವಿರೋಧಿಸಿದ್ದರು. ಆವಾಗಲೇ ಈ ಕಾನೂನನ್ನು ಸರ್ಕಾರ ಹಿಂಪಡೆಯುತ್ತದೆ ಅಂತಾ ಹೇಳಿದ್ದರು. ಈಗ ರಾಹುಲ್ ಗಾಂಧಿ ಹೇಳಿದ ರೀತಿಯೇ ಆಗಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತ ಹೋರಾಟಕ್ಕೆ ಮಣಿದು ಕಾಯಿದೆ ಹಿಂಪಡೆದಿದೆ. ಒಂದು ವರ್ಷ ಎರಡು ತಿಂಗಳು ರೈತರ ಹೋರಾಟದ ಬಳಿಕ ಕೇಂದ್ರ ಸರ್ಕಾರ ಕಾಯಿದೆ ಹಿಂಪಡೆದಿದೆ. ಈ ಅವಧಿಯಲ್ಲಿ ಶ್ರೀಮಂತರ ಮಾಡಿದ ಲಾಭ ಎಷ್ಟು?. ಸರ್ಕಾರ ಒಂದು ವರ್ಷದ ಬಳಿಕ ಕಾಯಿದೆ ಹಿಂಪಡೆದದ್ದು ಯಾಕೆ? ಈ ಬಗ್ಗೆ ಸರ್ಕಾರ ಜನರೆದು ಮಾಹಿತಿ ಬಹಿರಂಗಗೊಳಿಸಬೇಕು. ರೈತ ಪ್ರತಿಭಟನೆ ವೇಳೆ ತೀರಿಹೋದ ರೈತ ರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
PublicNext
19/11/2021 03:27 pm