ನವದೆಹಲಿ:ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಯನ್ನ ಹಿಂದಕ್ಕೇನೋ ಪಡೆದಿದೆ. ಆದರೆ ಈ ನಡೆಯನ್ನ ಕಾಂಗ್ರೆಸ್ ಪಕ್ಷ ತನ್ನದೇ ರೀತಿಯಲ್ಲಿಯೆ ಬಿಂಬಿಸುತ್ತಿದೆ.ರೈತರ ಹೋರಾಟ ಸರ್ಕಾರದ ಅಹಂಕಾರವನ್ನ ಅಡಗಿಸಿದೆ ಅಂತಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ರೈತರ 355 ದಿನಗಳ ಹೋರಾಟಕ್ಕೆ ಜಯ ಸಿಕ್ಕಿದೆ.ಕಳೆದ ವರ್ಷ ಸರ್ಕಾರ 3 ಕೃಷಿ ಕಾಯ್ದೆಯನ್ನ ಜಾರಿಗೆ ತಂದಿತ್ತು. ಇದು ಜಾರಿ ಆಗುತ್ತಿದ್ದಂತೆ ರೈತರು ಅದನ್ನ ವಿರೋಧಿಸಿದರು. ರೈತರ ಸತತ ವಿರೋಧಕ್ಕೆ ಈಗ ಫಲ ಸಿಕ್ಕಿದೆ.ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಯನ್ನ ವಾಪಸ್ ಪಡೆದಿದೆ.ಅನ್ನದಾತರ ಸತ್ಯಾಗ್ರಹ ಅಹಂಕಾರವನ್ನ ಅಡಗಿಸಿದೆ.ಅನ್ಯಾಯದ ವಿರುದ್ಧ ಗೆಲುವಿಗೆ ಅಭಿನಂದನೆಗಳು ಜೈ ಹಿಂದ್ ಜೈ ಹಿಂದ್ ಕಾ ಕಿಸಾನ್ ಎಂದು ರಾಹುಲ್ ಗಾಂಧಿ ಟ್ವಿಟರ್ ಮೂಲಕ ಹೇಳಿದ್ದಾರೆ.
ಇದಲ್ಲದೇ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನ ಹಿಂದಕ್ಕೆ ಪಡೆಯಲೇಬೇಕಾಗುತ್ತದೆ ಎಂದು ಕಳೆದ ಜನವರಿ-14 ರಂದು ರಾಹುಲ್ ಗಾಂಧಿ ಹೇಳಿದ್ದರು. ಆ ಮಾತು ಈಗ ಸತ್ಯವಾಗಿದೆ ಅಂತಲೇ ಹೇಳಬಹುದು.
PublicNext
19/11/2021 01:17 pm