ಉಡುಪಿ: ದೇಶದಲ್ಲಿ ವಿವಾದ ಸೃಷ್ಟಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.ಈ ಕುರಿತು ಪ್ರತಿಕ್ರಿಯೆಗೆ ಆಗಮಿಸಿದ ಮಾಧ್ಯಮದವರನ್ನು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಒಂದು ಗಂಟೆ ಕಾಯಿಸಿ ಪ್ರತಿಕ್ರಿಯೆ ನೀಡದೆ ತೆರಳಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಕಾರ್ಯಕ್ರಮಕ್ಕೆ ಉಡುಪಿಗೆ ಆಗಮಿಸಿದ್ದ ಕೇಂದ್ರ ಸಚಿವೆ ಕೃಷ್ಣಮಠಕ್ಕೆ ಭೇಟಿ ನೀಡಿದ್ದರು.ಈ ವೇಳೆ ಪ್ರತಿಕ್ರಿಯೆಗಾಗಿ ಮಾಧ್ಯಮದವರು ಬಂದಿರುವುದನ್ನು ಅರಿತುಕೊಂಡ ಸಚಿವೆ ಒಂದು ಗಂಟೆಗೂ ಹೆಚ್ಚು ಕಾಲ ಕಾಯಿಸಿದ್ದಾರೆ.ಬಳಿಕ ಭತ್ತ ಕೃಷಿಕರ ಸಮಸ್ಯೆ ,ಬಿಟ್ ಕಾಯಿನ್ ಮತ್ತು ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಶೋಭಾ ,ಕೃಷಿ ಕಾಯಿದೆ ವಾಪಸ್ ಬಗ್ಗೆ ಪ್ರಶ್ನೆ ಕೇಳಿದಾಗ ನೇರ ಕಾರಿನತ್ತ ತೆರಳಿ ಪ್ರಯಾಣ ಬೆಳೆಸಿದ ಪ್ರಸಂಗ ನಡೆಯಿತು.
PublicNext
19/11/2021 12:08 pm