ತಿರುವನಂತಪುರಂ(ಕೇರಳ): ಹಿಂದುತ್ವವೆಂದರೆ ಆಕ್ರಮಣಕಾರಿ ಫುಟ್‌ಬಾಲ್ ತಂಡವಿದ್ದಂತೆ ಎಂದು ಕಾಂಗ್ರೆಸ್ ಪಕ್ಷದ ಸಂಸದ ಶಶಿ ತರೂರ್ ಹೇಳಿದ್ದಾರೆ.
ತಮ್ಮ ತಂಡದ ಹೊರತಾಗಿ ಬೇರೆ ತಂಡ ಅಥವಾ ಆಟಗಾರರನ್ನು ಬೆಂಬಲಿಸಿದಲ್ಲಿ ಬ್ರಿಟಿಷ್ ಫುಟ್‌ಬಾಲ್ ತಂಡದವರು, ಅಂತವರ ಮೇಲೆ ದಾಳಿ ಮಾಡುತ್ತಾರೆ. ಈ ರೂಢಿ ಅವರಲ್ಲಿದೆ. ಅದರಂತೆ ಹಿಂದುತ್ವ ಕೂಡ. ತನ್ನನ್ನು ಬೆಂಬಲಿಸದವರ ಮೇಲೆ ಹಿಂದುತ್ವ ದಾಳಿ ಮಾಡುತ್ತದೆ.
ಆದರೆ ನೈಜ ಹಿಂದುತ್ವದ ಮೌಲ್ಯಗಳು ಸಹಿಷ್ಣುತೆಯನ್ನು ಬೋಧಿಸುತ್ತವೆ. ನೈಜ ಹಿಂದುತ್ವದಲ್ಲಿ ಬಹುತ್ವ ಮತ್ತು ಬಹುಸಂಸ್ಕೃತಿಯನ್ನು ಗೌರವಿಸುವ ಗುಣವಿದೆ ಎಂದು ಕೂಡ ಅವರು ಹೇಳಿದ್ದಾರೆ.
PublicNext
18/11/2021 09:37 pm