ಧಾರವಾಡ: ಇಡೀ ದೇಶದಾದ್ಯಂತ ಈಗ ಕರ್ನಾಟಕದ ಬಿಟ್ ಕಾಯಿನ್ ಪ್ರಕರಣ ಬಹಳಷ್ಟು ಚರ್ಚೆಯಾಗುತ್ತಿದೆ. ಈ ಬಿಟ್ ಕಾಯಿನ್‌ದಲ್ಲಿ ಬಿಜೆಪಿಯವರೂ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ಆದರೆ, ಆ ಸಂಬಂಧ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಾಗಲಿ ಇತರೆ ಪಕ್ಷದವರಾಗಲಿ ದಾಖಲೆ ಸಮೇತ ಆರೋಪ ಮಾಡುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಈ ಸಂಬಂಧ ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ. ದಾಖಲೆ ಇಲ್ಲದೇ ಆರೋಪ ಮಾಡಲಾಗುತ್ತಿದೆ. ಬಿಟ್ ಕಾಯಿನ್ ಪ್ರಕರಣದಲ್ಲಿರುವವರ ಮೇಲೆ ಕಾನೂನಾತ್ಮಕ ಕ್ರಮಗಳು ಜರುಗುತ್ತವೆ. ಈ ಸಂಬಂಧ ನ.25 ರಂದು ಕ್ಯಾಬಿನೆಟ್ ಸಭೆ ಕೂಡ ಕರೆಯಲಾಗಿದೆ ಎಂದರು.
PublicNext
18/11/2021 05:46 pm