ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಟ್ ಕಾಯಿನ್, ಕ್ರಿಪ್ಟೊಕರೆನ್ಸಿ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ

ನವದೆಹಲಿ: ವಿಶ್ವದ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಅಕ್ರಮ ಎಸಗುವ ದುಷ್ಟರ ಕೈಗೆ ಕ್ರಿಪ್ಟೊಕರೆನ್ಸಿ ಸಿಗದಂತೆ ಎಚ್ಚರವಹಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ವರ್ಚುವಲ್ ಮೂಲಕ ಭಾರತ- ಸಿಡ್ನಿ ಮಾತುಕತೆಯನ್ನುದ್ದೇಶಿಸಿ ಇಂದು ಮಾತನಾಡಿದ ಅವರು, ‘ಕ್ರಿಪ್ಟೊಕರೆನ್ಸಿಯು ಯುವ ಸಮೂಹವನ್ನೇ ಹಾಳು ಮಾಡಬಹುದು. ಲಕ್ಷಾಂತರ ಭಾರತೀಯರು ಡಿಜಿಟಲ್ ಕರೆನ್ಸಿಯಲ್ಲಿ ಹೂಡಿಕೆ ಮಾಡುತ್ತಿರುವಾಗ ಸಾಗರೋತ್ತರ ಹೂಡಿಕೆಗಳನ್ನು ನಿರ್ವಹಿಸಲು ನಿಯಂತ್ರಣಾ ಚೌಕಟ್ಟಿನ ಅಗತ್ಯತೆ ಬಗ್ಗೆ ಸರ್ಕಾರ ಪರಿಗಣಿಸುತ್ತಿದೆ. ಭಾರತದ ಉದ್ಯಮ ಮತ್ತು ಸೇವಾ ಕ್ಷೇತ್ರಗಳು ಬೃಹತ್ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿವೆ. ಬಿಟ್‌ಕಾಯಿನ್ ಅಥವಾ ಕ್ರಿಪ್ಟೊಕರೆನ್ಸಿ ಉದಾಹರಣೆಯನ್ನೇ ತೆಗೆದುಕೊಳ್ಳಿ, ಕ್ರಿಪ್ಟೋಕರೆನ್ಸಿಯ ವಿಷಯದಲ್ಲಿ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಭಾರತದ ಉದ್ಯಮ ಮತ್ತು ಸೇವಾ ಕ್ಷೇತ್ರಗಳು ಸಂಪನ್ಮೂಲಗಳ ಪರಿವರ್ತನೆ ಮತ್ತು ಜೀವವೈವಿಧ್ಯದ ರಕ್ಷಣೆಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಬೃಹತ್ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿವೆ. ದತ್ತಾಂಶ ಸಂಪನ್ಮೂಲವನ್ನು ಭಾರತವು ಜನರ ಸಬಲೀಕರಣಕ್ಕಾಗಿ ಬಳಸುತ್ತಿದೆ. ಖಾಸಗಿ ಹಕ್ಕುಗಳ ರಕ್ಷಣೆಯ ಖಾತರಿಯೊಂದಿಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಈ ಕೆಲಸ ಮಾಡಲು ದೇಶವು ಸಾಟಿಯಿಲ್ಲದ ಅನುಭವ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Edited By : Vijay Kumar
PublicNext

PublicNext

18/11/2021 05:11 pm

Cinque Terre

56.9 K

Cinque Terre

0

ಸಂಬಂಧಿತ ಸುದ್ದಿ