ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದ ನಲಪಾಡ್ ಪೆವಿಲಿಯನ್ನಲ್ಲಿ ನಿನ್ನೆ ಅಲ್ಪಸಂಖ್ಯಾತ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣದ ವೇಳೆ ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ಡಿಕೆ..ಡಿಕೆ ಎಂದು ಘೋಷಣೆ ಕೂಗಿದ್ದಾರೆ. ಇದರ ನಡುವೆ ಇನ್ನೂ ಕೆಲ ಕಾರ್ಯಕರ್ತರು 'ಹೌದು ಹುಲಿಯಾ' ಎಂದು ಕೂಗಿದ್ದಾರೆ.
ಈ ಎರಡೂ ಘೋಷಣೆಗಳು ಅತಿರೇಕ ಎನಿಸಿದಾಗ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಏ ಕೂತ್ಕೊಳಯ್ಯ ಅಲ್ಲಿ ಎಂದು ಕಾರ್ಯಕರ್ತರಿಗೆ ಗದರಿಸಿದ್ದಾರೆ. ಅದು ಸಹಿಸಲಸಾಧ್ಯವಾದಾಗ ಸಿದ್ದರಾಮಯ್ಯ ತಮ್ಮ ಭಾಷಣ ನಿಲ್ಲಿಸಿದ್ದಾರೆ. ಹಾಗೂ ವೇದಿಕೆಯಿಂದ ಕೆಳಗಿಳಿದಿದ್ದಾರೆ.
ಸಿದ್ದರಾಮಯ್ಯ ಬಳಿಕ ವೇದಿಕೆಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಕರ್ತರ ಮೇಲೆ ಕೆಂಡಾಮಂಡಲರಾಗಿದ್ದಾರೆ. ಎಲ್ಲರನ್ನೂ ಪಾರ್ಟಿಯಿಂದ ಕಿತ್ತಾಕುತ್ತೇನೆ. ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ರು. ಅವರ ಭಾಷಣಕ್ಕೆ ಅಡ್ಡಿ ಮಾಡಿದ್ದೀರಿ. ಕಾಂಗ್ರೆಸ್ ಪಕ್ಷದ ದ್ರೋಹಿಗಳು ನೀವೆಲ್ಲ' ಎಂದು ಜಮೀರ್ ಬೆಂಬಲಿಗರ ಮೇಲೆ ಡಿ.ಕೆ ಶಿವಕುಮಾರ್ ಗರಂ ಆಗಿದ್ದಾರೆ.
PublicNext
17/11/2021 10:55 pm