ಗದಗ: ಕೋಲಾರದಲ್ಲಿ ದತ್ತಮಾಲಾಧಾರಿಗಳ ಮೇಲಿನ ಹಲ್ಲೆಯನ್ನ ಖಂಡಿಸಿ ಆರ್ಎಸ್ಎಸ್, ಹಿಂದೂ ಜಾಗರಣ ವೇದಿಕೆ ನಾಳೆ ಕೋಲಾರ ಬಂದ್ ಗೆ ಕರೆ ನೀಡಿದೆ. ಈ ಬಂದ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಕೋಲಾರ ಪ್ರವೇಶ ನಿರ್ಬಂಧ ಕೋರಿ ಹಳೆಯ ಮೂವತ್ತು ಕೇಸ್‌ಗಳನ್ನು ಸೇರಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿದೆ.
ಹಿಂದೂ ನಾಯಕರನ್ನ ತಡೆದರೆ ಹಿಂದುತ್ವವನ್ನೇ ತಡೆದಂತೆ. ನಿರ್ಬಂಧ ಆಜ್ಞೆಯನ್ನ ಮುಖ್ಯಮಂತ್ರಿ, ಗೃಹ ಮಂತ್ರಿಗಳು ವಾಪಾಸ್ ಪಡೆಯಬೇಕು, ಇಂದು ಪೊಲೀಸರು ನಿರ್ಬಂಧ ಆರ್ಡರ್ಅನ್ನು ನೀಡಿದ್ದಾರೆ ಎಂದು ಗದಗದಲ್ಲಿ ಆಕ್ರೋಶಿತರಾಗಿ ಹೇಳಿಕೆ ನೀಡಿದ್ದಾರೆ. ನಾಳೆ ಬೆಂಗಳೂರಿನಲ್ಲಿ ನಿರ್ಬಂಧ ಆಜ್ಞೆಗೆ ಸ್ಟೇ ತರಲು ಹೋಗುತ್ತಿದ್ದೇನೆ. ಸ್ಟೇ ಆರ್ಡರ್ ತೆಗೆದುಕೊಂಡು ಕೋಲಾರಗೆ ಹೋಗುತ್ತೇನೆ. ಕಾಂಗ್ರೆಸ್, ಜೆಡಿಎಸ್ ಹಿಂದೂ ವಿರೋಧಿಗಳು, ಬಿಜೆಪಿ ಸರ್ಕಾರ ಇದ್ದಾಗಲೂ ಈ ರೀತಿ ಬ್ಯಾನ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ಇಡೀ ರಾಜ್ಯ ಇದನ್ನು ಗಮನಿಸುತ್ತಿದೆ. ಹಲ್ಲೆ ಮಾಡೋದನ್ನ ಸರ್ಕಾರದವರು ಸಮರ್ಥಿಸುತ್ತೀರಾ? ಉಗ್ರವಾಗಿ ಮಾತನಾಡೋದೇ ಅನಾಹುತ ಆಗುತ್ತಾ? ಪೊಲೀಸರಿಲ್ಲವಾ? ಗಲಾಟೆ ಮಾಡಿದ್ರೆ ಅವರ ಮೇಲೆ ಗುಂಡು ಹಾರಿಸಿ ಪ್ರಜಾ ಪ್ರಭುತ್ವದ ಆಧಾರದ ಮೇಲೆ ಪ್ರತಿಭಟನೆ ಮಾಡುತ್ತಿದ್ದೇವೆ ನಾನು ಕಾನೂನು ಬಾಹಿರವಾಗಿ ಮಾತನಾಡಿದರೆ ಕೇಸ್ ಹಾಕಿ ಅರೆಸ್ಟ್ ಮಾಡಿ. ಕಾಂಗ್ರೆಸ್ ಮನಸ್ಥಿತಿಯ ಬಿಜೆಪಿ ಈ ಬಗ್ಗೆ ಯೋಚಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.
PublicNext
17/11/2021 10:34 pm