ಬೆಂಗಳೂರು:ನಾಳೆ ದೆಹಲಿಯಿಂದ ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಹಾಗಾಗಿಯೇ ಈಗಾಗಲೇ ಪರೋಕ್ಷವಾಗಿಯೇ ಆಕಾಂಕ್ಷಿಗಳಿಗೆ ತಯಾರಿ ನಡೆಸಲು ತಿಳಿಸಿದ್ದೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಜನ ಸ್ವರಾಜ್ ಯಾತ್ರೆ ನಾಳೆಯಿಂದಲೇ ನಾಲ್ಕು ತಂಡಗಳಲ್ಲಿ ಆರಂಭಗೊಳ್ಳುತ್ತದೆ. ಈಗಾಗಲೇ ಕಾರ್ಯಕರ್ತರ ಜೊತೆಗೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇನ್ನು ನಾಳೆ ವಿಧಾನಪರಿಷತ್ ಚುನಾವಣೆ ಬಿಜೆಪಿ ಪಟ್ಟಿ ಹೊರಬೀಳೋ ಸಾಧ್ಯತೆ ಇದೆ. ಈಗಾಗಲೇ ಆಕಾಂಕ್ಷಿಗಳಿಗೂ ಎಲ್ಲ ತಯಾರಿ ಮಾಡಿಕೊಳ್ಳುವಂತೆ ತಿಳಿಸಿದ್ದೇವೆ. ಹಾಗೇನೆ ಈ ಪರಿಷತ್ ಚುನಾವಣೆ ವಾತಾವರಣ ನಮಗೆ ಅನುಕೂಲಕರವಾಗಿಯೇ ಇದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಎರಡೇ ಎರಡು ಸ್ಥಾನದಲ್ಲಿ ನಮಗೆ ತೊಂದರೆ ಆಗಬಹುದು. ಆದರೆ ಉಳಿದೆಲ್ಲ ಸ್ಥಾನಗಳಲ್ಲಿ ನಾವೇ ಗೆಲ್ಲೋದು ಎಂದು ವಿಶ್ವಾಸದಿಂದಲೇ ನುಡಿದಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ.
PublicNext
17/11/2021 07:15 pm