ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚುನಾವಣೆ ರ್‍ಯಾಲಿಗಳಿಗೆ ಜನರ ತೆರಿಗೆ ಹಣ ಬಳಸಲಾಗುತ್ತಿದೆ: ಪ್ರಿಯಾಂಕಾ ಸಿಡಿಮಿಡಿ

ಲಕ್ನೋ(ಉತ್ತರ ಪ್ರದೇಶ) ಚುನಾವಣಾ ತಯಾರಿ ನಡೆಸುತ್ತಿರುವ ಉತ್ತರ ಪ್ರದೇಶ ಸರ್ಕಾರ ಪ್ರಧಾನಿ ಹಾಗೂ ಅಮಿತ್ ಶಾ ಅವರ ಪ್ರಚಾರ ರ್‍ಯಾಲಿಗೆ ಜನರ ತೆರಿಗೆ ಹಣ ಬಳಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಬಿಜೆಪಿ ಮಾಡುತ್ತಿರುವ ಇಂತಹ ಚಾಲಾಕಿ ರಾಜಕಾರಣ ಉತ್ತರ ಪ್ರದೇಶದ ಜನರಿಗೆ ಅರ್ಥವಾಗಿದೆ. ಜನರನ್ನು ಪ್ರಚಾರದ ರ್‍ಯಾಲಿಯಲ್ಲಿ ಸೇರಿಸಲು ಜನರ ತೆರಿಗೆ ಹಣವನ್ನೇ ಬಳಸಲಾಗುತ್ತಿದೆ ಎಂದಿರುವ ಪ್ರಿಯಾಂಕಾ ಈ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳ ತುಣುಕುಗಳನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಲಾಕ್‍ಡೌನ್ ಸಮಯದಲ್ಲಿ ಲಕ್ಷಾಂತರ ಕಾರ್ಮಿಕರು ದೆಹಲಿಯಿಂದ ಉತ್ತರ ಪ್ರದೇಶದ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ಹಿಂದಿರುಗುತ್ತಿದ್ದಾಗ ಬಿಜೆಪಿ ಸರ್ಕಾರ ಅವರಿಗೆ ಬಸ್ ವ್ಯವಸ್ಥೆ ಮಾಡಲಿಲ್ಲ. ಆದರೆ ಪ್ರಧಾನಿ ಮತ್ತು ಗೃಹ ಸಚಿವರ ಕಾರ್ಯಕ್ರಮಗಳಿಗೆ ಜನ ಸೇರಿಸಲು ಸರ್ಕಾರ ಕೋಟಿಗಟ್ಟಲೆ ಸಾರ್ವಜನಿಕರ ಹಣವನ್ನು ವೆಚ್ಚ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

16/11/2021 06:48 pm

Cinque Terre

29.78 K

Cinque Terre

15

ಸಂಬಂಧಿತ ಸುದ್ದಿ