ನವದೆಹಲಿ: 2022 ಆರಂಭದಲ್ಲಿ ದೇಶದ ಐದುಧ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣೆ ರಣತಂತ್ರ ರೂಪಿಸಲು ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಅಣಿಯಾಗಿವೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಹಾಗೂ ಗೋವಾ ರಾಜ್ಯಗಳಲ್ಲಿ ರಾಜಕೀಯ ಜಿದ್ದಾಜಿದ್ದಿ ನಡೆಯಲಿದೆ. ಖ್ಯಾತ ಚುನಾವಣಾ ಸಂಸ್ಥೆ ಸಿ-ವೋಟರ್ ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಇದರ ವರದಿ ಪ್ರಕಾರ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.
ಇದರಲ್ಲಿ ಉತ್ತರ ಪ್ರದೇಶ, ಉತ್ತರಾಖಾಂಡ, ಗೋವಾಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುತ್ತದೆ. ಪಂಜಾಬ್ ಹಾಗೂ ಮಣಿಪುರದಲ್ಲಿ ಅತಂತ್ರಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿತೆ ಎಂದು ಹೇಳಿದೆ.
ಉತ್ತರ ಪ್ರದೇಶ :
ಪ್ರಸ್ತುತ ಬಿಜೆಪಿ ಸರ್ಕಾರವೇ ಇರುವ ಉತ್ತರ ಪ್ರದೇಶದಲ್ಲಿ ಪುನಃ ಬಿಜೆಪಿ ಮುಂದುವರಿಯುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಆದರೆ, ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಬಿಜೆಪಿಯು ಈ ಬಾರಿ ಹೆಚ್ಚು ಸೀಟುಗಳನ್ನು ಕಳೆದುಕೊಳ್ಳುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಬಿಜೆಪಿಯು 217 ಸ್ಥಾನ, ಎಸ್‌ಪಿ ಹಾಗೂ ಮಿತ್ರ ಪಕ್ಷಗಳು 156 ಸ್ಥಾನ, ಬಿಎಸ್‌ಪಿ 18 ಸ್ಥಾನ ಹಾಗೂ ಕಾಂಗ್ರೆಸ್ 8 ಸ್ಥಾನ ಗಳಿಸುವ ಸಾಧ್ಯತೆಗಳಿವ ಎಂದು ಹೇಳಲಾಗಿದೆ.
ಪಂಜಾಬ್ :
ಈ ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ (ಆಪ್) ಹಾಗೂ ಕಾಂಗ್ರೆಸ್ ನಡುವೆ ನೇರ ಮುಖಾಮುಖಿ ಸೃಷ್ಟಿಯಾಗುತ್ತದೆ. ಆದರೆ, ಎರಡೂ ಪಕ್ಷಗಳು ಅಧಿಕಾರ ಗದ್ದುಗೆ ಹಿಡಿಯುವಲ್ಲಿ ವಿಫಲವಾಗುತ್ತವೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ಗೆ 46, ಆಪ್ ಪಕ್ಷಕ್ಕೆ 51, ಶಿರೋಮಣಿ ಅಕಾಲಿ ದಳಕ್ಕೆ 20 ಸ್ಥಾನ ಸಿಕ್ಕರೆ, ಬಿಜೆಪಿಗೆ ಶೂನ್ಯ ಸಂಪಾದನೆಯಾಗಲಿದೆ ಎಂದು ಹೇಳಲಾಗಿದೆ.
ಉತ್ತರಾಖಾಂಡ :
ಇಲ್ಲಿ ಬಿಜೆಪಿ ಸರ್ಕಾರ ಮುಂದುವರಿಯುವ ಅವಕಾಶಗಳಿವೆ. ಆದರೆ, ಕಾಂಗ್ರೆಸ್ ತೀರಾ ಹತ್ತಿರದ ಪೈಪೋಟಿ ನೀಡಬಲ್ಲದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಬಿಜೆಪಿಗೆ 38 ಸ್ಥಾನ, ಕಾಂಗ್ರೆಸ್‌ಗೆ 32 ಸ್ಥಾನ ಸಿಗಬಲ್ಲದು ಎನ್ನಲಾಗಿದೆ.
ಮಣಿಪುರ :
ಈ ರಾಜ್ಯದಲ್ಲಿ ಎನ್‌ಡಿಎ ಅಧಿಕಾರದಲ್ಲಿ ಮುಂದುವರಿಯುವ ಬಗ್ಗೆ ಅನುಮಾನಗಳಿವೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಆದರೆ, ಎರಡೂ ಪಕ್ಷಗಳಿಗೆ ಬಹುಮತ ಗಳಿಸುವಲ್ಲಿ ವಿಫಲವಾಗುವುದಂತೂ ಸ್ಪಷ್ಟ ಎಂದು ಹೇಳಲಾಗಿದೆ. ಇಲ್ಲಿ ಬಿಜೆಪಿಗೆ 27, ಕಾಂಗ್ರೆಸ್‌ಗೆ 22, ಎನ್‌ಪಿಎಫ್ಗೆ 6 ಸ್ಥಾನ ಸಿಗುವ ಸಾಧ್ಯತೆಗಳಿವೆ.
ಗೋವಾ :
ಇಲ್ಲಿಯೂ ಬಿಜೆಪಿ ಪುನಃ ಅಧಿಕಾರಕ್ಕೆ ಬರಬಹುದು. ಸರ್ಕಾರ ರಚನೆಗೆ ಎಷ್ಟು ಬೇಕೋ ಅಷ್ಟು ಸ್ಥಾನಗಳು ಲಭ್ಯವಾಗುವ ಸಾಧ್ಯತೆಗಳಿವೆ. ಬಿಜೆಪಿಗೆ 21 ಸ್ಥಾನ, ಆಮ್ ಆದ್ಮಿ ಪಾರ್ಟಿಗೆ (ಆಪ್) 5, ಕಾಂಗ್ರೆಸ್‌ಗೆ 4 ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
PublicNext
14/11/2021 11:35 am