ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ಫೋಟೋಗೆ ಚಿನ್ನದ ಫ್ರೇಮ್- ಭರ್ಜರಿ ಗಿಫ್ಟ್ ಕೊಟ್ಟ 'ಕೈ' ಮುಖಂಡ

ಬಾಗಲಕೋಟೆ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಾದಾಮಿ ಕಾಂಗ್ರೆಸ್ ಮುಖಂಡ ಮಹೇಶ್ ಹೊಸಗೌಡ ಅವರು ಭರ್ಜರಿ ಗಿಫ್ಟ್ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಫೋಟೋಗೆ 40 ಗ್ರಾಂ ಚಿನ್ನದ ಫ್ರೇಮ್ ಹಾಕಲಾಗಿದೆ. ಬ್ಯಾಂಕಾಕ್‌ನಲ್ಲಿ ತಯಾರು ಮಾಡಿಸಲಾದ ಈ ಫೋಟೋವನ್ನು ಸಿದ್ದರಾಮಯ್ಯ ಅವರಿಗೆ ಕೊಟ್ಟು ಸನ್ಮಾನಿಸಲಾಗಿದೆ.

ಸಾಮೂಹಿಕ ವಿವಾಹ, ಕಲ್ಯಾಣ ಮಂಟಪ ಉದ್ಘಾಟನೆಗಾಗಿ ಸಿದ್ದರಾಮಯ್ಯ ಅವರು ಇಂದು ಬಾದಾಮಿಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಭರ್ಜರಿಯಾಗಿ ಸ್ವಾಗತ ಕೋರಲಾಯಿತು. ಮಾಜಿ ಸಿಎಂ ಅವರನ್ನು ನೋಡಲು ನೂಕು ನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

Edited By : Vijay Kumar
PublicNext

PublicNext

13/11/2021 06:08 pm

Cinque Terre

44.04 K

Cinque Terre

2

ಸಂಬಂಧಿತ ಸುದ್ದಿ