ಬೆಂಗಳೂರು:ಬಿಟ್ ಕಾಯಿನ್ ಪ್ರಕರಣ ಇನ್ನು ಯಾರ ಜನ್ಮವನ್ನ ಜಾಲಾಡುತ್ತದೆಯೋ ಏನೋ. ಬಿಜೆಪಿಯನ್ನ ಕಾಂಗ್ರೆಸ್,ಕಾಂಗ್ರೆಸ್ ಅನ್ನ ಬಿಜೆಪಿ ದೂರುತ್ತಲೇ ಇದೆ. ಅದರಂತೆ ಈಗ ಬಿಜೆಪಿ ತನ್ನ ಅಧಿಕೃತ ಪೇಜ್ ಅಲ್ಲಿ ಡಿಕೆ ಶಿವಕುಮಾರ್ ಅವರ ಜನ್ಮಜಾಲಾಡುತ್ತಿದೆ.ಅಕ್ರಮಗಳ ಸರದಾರ ನೀವು. ಬಿಟ್ ಕಾಯಿನ್ ಪ್ರಕರಣದಲ್ಲಿ ಬೆಂಬಲಿಗರ ಮೂಲಕ ನೀವೂ ಪಾಲು ಪಡೆದಿರುವ ಅನುಮಾನ ಇದೆ ಅಂತಲೇ ದೂರಿದೆ.
ಮಾಜಿ ಸಿಎಂ ಸಿದ್ದರಾಮಯ್ಯನವರನ್ನೂ ತರಾಟೆಗೆ ತೆಗೆದುಕೊಂಡಿರೋ ಬಿಜೆಪಿ, ವೀರಶೈವ ಲಿಂಗಾಯತರ ವಿಭಜನೆಗೆ ಎಂ.ಬಿ.ಪಾಟೀಲರನ್ನ ಸಿದ್ದರಾಮಯ್ಯ ದಾಳವನ್ನ ಬಳಸಿಕೊಂಡರು. ಇದರಿಂದ ಕಾಂಗ್ರೆಸ್ ಸರ್ವನಾಶವಾಯಿತು ಅಂತಲೇ ಟೀಕಿಸಿದೆ ನಾನು ದಲಿತ ಅಂತಲೇ ಸಿದ್ದರಾಮಯ್ಯ ಹೇಳಿ ದಲಿತ ನಾಯಕರನ್ನ ಹತ್ತಿಕ್ಕಿ ದಲಿತರನ್ನ ಅಮಾನಿಸಿದ್ದಾರೆ ಅಂತಲೂ ಆರೋಪಿಸಿದೆ ಬಿಜೆಪಿ.
ದಲಿತ ಎಂಬ ಪದವನ್ನ ಸಿದ್ಧರಾಮಯ್ಯ ಬಳಸಿಯೇ ಇಲ್ಲ ಅಂತ ಸಮರ್ಥಿಸಿಕೊಳ್ಳುವ ಎಂಬಿ ಪಾಟೀಲರೇ, ಎಷ್ಟು ದಿನ ನೀವು ಸಿದ್ಧರಾಮಯ್ಯ ಅವರ ರಾಜಕೀಯ ದಾಳವಾಗುತ್ತೀರಾ ಅಂತಲೇ ಪ್ರಶ್ನಿಸಿ ಟೀಕಿಸಿದೆ ಬಿಜೆಪಿ.
PublicNext
13/11/2021 11:53 am