ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಟ್ ಕಾಯಿನ್ ಪ್ರಕರಣ: ನಮ್ಮವರಿದ್ದರೆ ಒಳಗೆ ಹಾಕ್ಲಿ:ಡಿಕೆ ಶಿವಕುಮಾರ್

ಬೆಂಗಳೂರು: ಬಿಟ್ ಕಾಯಿನ್ ಕೇಸ್ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ ಆಗಿಯೇ ಇವತ್ತು ಮಾತನಾಡಿದ್ದಾರೆ. ಬಿಜೆಪಿ ಸರ್ಕಾರ ಮಾಡ್ತಿರೋ ಆರೋಪವನ್ನೂ ಅಷ್ಟೇ ಕಟುವಾಗಿಯೇ ಟೀಕಿಸಿದ್ದಾರೆ.ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಕೇಳಿದ್ದಾರೆ.

ಬಿಟ್ ಕಾಯಿನ್ ಪ್ರಕರಣ ED ಗೆ ಕೊಟ್ಟವರಾರು ? ಈ ಪ್ರಕರಣದಲ್ಲಿ ಯಾರೆಲ್ಲ ಇದ್ದಾರೆ ಅನ್ನೋದು ನಮ್ಗೂ ಗೊತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚನಾಮೆ ಆಗಿದೆ. ಸಾಕ್ಷಿಗಳೂ ಸಿಕ್ಕಿವೆ.ಆದರೂ ನಮ್ಮವರ ಮೇಲೂ ಹೇಳಿದ್ರು. ಇದು ಎಷ್ಟು ಸರಿ ಅಂತಲೇ ಕೇಳಿದ್ದಾರೆ ಡಿಕೆಶಿ.

ಸಮಯ ಬಂದಾಗ ಎಲ್ಲವೂ ಗೊತ್ತಾಗುತ್ತದೆ ಬಿಡಿ.ಇಷ್ಟಿರೋವಾಗ ಹೋಂ ಮಿನಿಸ್ಟರ್ ಸುಮ್ನೆ ಹೇಳ್ತಾರಾ ? ಕಾಂಗ್ರೆಸ್ ನವರಿದ್ದರೆ ಅರೆಸ್ಟ್ ಮಾಡಿ ಒಳಗೆ ಹಾಕ್ಲಿ.ನಾವೇನಾದ್ರೂ ಅವರನ್ನ ಬೇಡ ಅಂದ್ವಾ? ಯಾಕೆ ರಾಜ್ಯ ಸರ್ಕಾರ ಆ ಕೆಲಸ ಮಾಡ್ತಿಲ್ಲ ? ಹೀಗೆ ಡಿಕೆ ಶಿವಕುಮಾರ್,ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.

Edited By : Nagesh Gaonkar
PublicNext

PublicNext

12/11/2021 09:27 pm

Cinque Terre

55.47 K

Cinque Terre

1